ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ನಡೆಸುತ್ತಿರುವ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ಮೀನುಗಾರರು ಧರಣಿ ಮುಂದುವರಿಸಿದ್ದಾರೆ.
ಕಾರವಾರದಲ್ಲಿ 7ನೇ ದಿನಕ್ಕೆ ಕಾಲಿಟ್ಟ ಮೀನುಗಾರರ ಹೋರಾಟ.. - ಸಾಗರಮಾಲಾ ಯೋಜನೆ
ಸಾಗರಮಾಲಾ ಯೋಜನೆಯಡಿ 2ನೇ ಹಂತದ ಬಂದರು ಅಭಿವೃದ್ಧಿಯಿಂದ ಕಡಲಂಚಿನಲ್ಲಿ ಮೀನುಗಾರಿಕೆಗೆ ತೊಂದರೆಯಾಗಲಿದೆ. ಮಾತ್ರವಲ್ಲದೆ ಕಾರವಾರದ ಏಕೈಕ ಕಡಲತೀರ ಮಾಯವಾಗುವ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಕಾರವಾರದಲ್ಲಿ ಮೀನುಗಾರರ ಹೋರಾಟ
ಸಾಗರಮಾಲಾ ಯೋಜನೆಯಡಿ 2ನೇ ಹಂತದ ಬಂದರು ಅಭಿವೃದ್ಧಿಯಿಂದ ಕಡಲಂಚಿನಲ್ಲಿ ಮೀನುಗಾರಿಕೆಗೆ ತೊಂದರೆಯಾಗಲಿದೆ. ಮಾತ್ರವಲ್ಲದೆ ಕಾರವಾರದ ಏಕೈಕ ಕಡಲತೀರ ಮಾಯವಾಗುವ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಬಗ್ಗೆ ಕಳೆದ ಆರು ದಿನದಿಂದ ಮೀನುಗಾರಿಕೆ ಹಾಗೂ ಮೀನು ಮಾರಾಟ ಬಂದ್ ಮಾಡಿರುವ ಮೀನುಗಾರರು, ಇಂದು ಕೂಡ ಒಣ ಮೀನು ಮಾರಾಟ ಬಂದ್ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ. ಯಾವುದೇ ಕಾರಣಕ್ಕೂ ಮೀನುಗಾರರಿಗೆ ತೊಂದರೆಯಾಗುವ ಯೋಜನೆ ಜಾರಿ ಮಾಡಲು ಬಿಡುವುದಿಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.