ಕಾರವಾರ: ಬಲೆಗೆ ಬಿದ್ದಿದ್ದ ಬೃಹತ್ ತಿಮಿಂಗಿಲ (ವ್ಹೇಲ್ ಶಾರ್ಕ್)ವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಯಾರೂ ಕೂಡ ಆಹಾರಕ್ಕಾಗಿ ಬಳಸದ ಕಾರಣ ಮೀನುಗಾರರು ವಾಪಸ್ ಕಡಲಿಗೆ ಬಿಟ್ಟಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ತಡದಿ ಬಂದರಿನಲ್ಲಿ ನಡೆದಿದೆ.
ಬಲೆಗೆ ಬಿದ್ದಿದ್ದ ಬೃಹತ್ ಶಾರ್ಕ್ ಮರಳಿ ಕಡಲಿಗೆ ಬಿಟ್ಟ ಮೀನುಗಾರರು ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ತಡದಿ ಭಾಗದ ಮೀನುಗಾರರಿಗೆ ಈ ಮೀನು ದೊರೆತ್ತಿದ್ದು, ಬರೋಬ್ಬರಿ 700 ರಿಂದ 800 ಕೆಜಿ ಹಾಗೂ 11 ಅಡಿ ಉದ್ದವಿದೆ. ಇದನ್ನು ಬೇಟೆಯಾಡುವುದು ಹಾಗೂ ಆಹಾರಕ್ಕಾಗಿ ಬಳಸುವುದು ಅಪರಾಧವಾಗಿದೆ. ಹಾಗಾಗಿ ಮೀನುಗಾರರು ಮೀನನ್ನು ವಾಪಸ್ ಕಡಲಿಗೆ ಬಿಟ್ಟಿದ್ದಾರೆ.
ಓದಿ: ಕೊರೊನಾ ಸೋಂಕು ಹಿನ್ನೆಲೆ: ಟ್ರಾಮಾ ಸೆಂಟರ್ಗೆ ಶಿಫ್ಟ್ ಆದ ಶಶಿಕಲಾ
ಈ ಮೀನುಗಳು ಹೆಚ್ಚಾಗಿ ಗುಜರಾತ್ ಕಡಲ ತೀರದಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಕಾಣ ಸಿಗುತ್ತವೆ. ಆದರೆ, ಇತ್ತೀಚೆಗೆ ಬಹಳ ಅಪರೂಪವಾಗಿವೆ. ಹೀಗಾಗಿ ಇವುಗಳ ಸಂರಕ್ಷಣೆಗಾಗಿ ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಕಡಲಜೀವ ವಿಜ್ಞಾನ ಕೇಂದ್ರದ ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ.
ವಿಶ್ವದ ಅತಿದೊಡ್ಡ ಮೀನುಗಳ ಪೈಕಿ ಇದು ಕೂಡ ಒಂದು ಎನ್ನಲಾಗಿದ್ದು, ಶಾಲಾ ಬಸ್ ಗಾತ್ರದವರೆಗೆ ಬೆಳೆಯುತ್ತೇವೆ. ಆದರೆ ಸಣ್ಣ ಸಮುದ್ರ ಜೀವಿಗಳನ್ನು ಮತ್ತು ಮೀನಿನ ಮೊಟ್ಟೆಗಳನ್ನು ತಿಂದು ಬದುಕುತ್ತವೆ.