ಕರ್ನಾಟಕ

karnataka

ETV Bharat / state

ಗೋವಾದಿಂದ ಬಂದು ಕ್ವಾರಂಟೈನ್​ ಕೇಂದ್ರ ಸೇರಿದ ಮೀನುಗಾರರು

ಗೋವಾದಿಂದ ಕಾರವಾರಕ್ಕೆ ಬೋಟ್ ಮೂಲಕ ಬಂದಿದ್ದ 41 ಮೀನುಗಾರರನ್ನು ಕರಾವಳಿ ಕಾವಲು ಪಡೆ ಪೊಲೀಸರು ಪರೀಕ್ಷೆಗೆ ಒಳಪಡಿಸಿ ಕುಮಟಾದ ಕೊಂಕಣ್ ಎಜುಕೇಶನ್ ಟ್ರಸ್ಟ್​ನಲ್ಲಿ ಪ್ರಾರಂಭಿಸಿರುವ ಸರ್ಕಾರಿ ಕ್ವಾರಂಟೈನ್​ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ.

fishermen
ಮೀನುಗಾರರು

By

Published : Mar 30, 2020, 7:53 AM IST

ಕಾರವಾರ:ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಿಯಾಗಿ ಊಟ, ತಿಂಡಿ ಸಿಗುತ್ತಿಲ್ಲ ಎಂದು ಗೋವಾದಿಂದ ಕಾರವಾರಕ್ಕೆ ಬೋಟ್ ಮೂಲಕ ಬಂದಿದ್ದ 41 ಮೀನುಗಾರರನ್ನು ಪೊಲೀಸರು ಸರ್ಕಾರಿ ಕ್ವಾರಂಟೈನ್​ ಕೇಂದ್ರಕ್ಕೆ ಸೇರಿಸಿದ್ದಾರೆ.

ಗೋವಾದ ವಾಸ್ಕೋಗೆ ಕೆಲಸಕ್ಕಾಗಿ ತೆರಳಿದ್ದ ಕುಮಟಾ ತಾಲೂಕಿನ ಬೆಟ್ಕುಳಿ ಹಾಗೂ ಕಿಮಾನಿ ಗ್ರಾಮದ 41 ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರು ಹಿಡಿಯುತ್ತಾರೆಂದು 24 ನೌಕಾ ಮೈಲಿ ದೂರದಿಂದ ಅಂಕೋಲಾದ ತದಡಿ ಬಂದರಿಗೆ ಆಗಮಿಸಿದ್ದರು‌. ಈ ಬಗ್ಗೆ ವಿಷಯ ತಿಳಿದು ತಕ್ಷಣ ಬಂದರಿಗೆ ಆಗಮಿಸಿದ ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಗೋಕರ್ಣ ಪೊಲೀಸರು 41 ಮೀನುಗಾರರನ್ನು ಪರೀಕ್ಷೆಗೆ ಒಳಪಡಿಸಿ ಕುಮಟಾದ ಕೊಂಕಣ್ ಎಜುಕೇಶನ್ ಟ್ರಸ್ಟ್​ನಲ್ಲಿ ಪ್ರಾರಂಭಿಸಿರುವ ಸರ್ಕಾರಿ ಕ್ವಾರಂಟೈನ್​ಗೆ ಕಳಿಸಿದ್ದಾರೆ.

ಗೋವಾದಲ್ಲಿ ತಾವು ತಂಗಿದ್ದ ಪ್ರದೇಶದಲ್ಲಿ ಊಟ ತಿಂಡಿ ಸರಿಯಾಗಿ ಸಿಗದ ಕಾರಣ ಮತ್ತು ಸಾರಿಗೆ ಸಂಪರ್ಕ ಇಲ್ಲದ್ದರಿಂದ ಬೋಟ್​ ಮೂಲಕ ಬಂದಿರುವುದಾಗಿ ಮೀನುಗಾರರು ಹೇಳಿದ್ದಾರೆ. ಆದರೆ ಕೊರೊನಾ ವೈರಸ್ ಮಾರಕವಾಗಿದ್ದು, ಇದರ ತಡೆಗೆ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಮಾಡಲಾಗಿದೆ. ಜನರ ಸುರಕ್ಷತೆಗಾಗಿ ಹೊರ ರಾಜ್ಯದ ಮೀನುಗಾರರು ಇದಕ್ಕೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ABOUT THE AUTHOR

...view details