ಕರ್ನಾಟಕ

karnataka

ETV Bharat / state

3 ದಿನದಿಂದ ಲೇಡಿಸ್ ಬೀಚ್​ನಲ್ಲಿ ಅನ್ನ - ನೀರು ಇಲ್ಲದೇ ಅಸ್ವಸ್ತಗೊಂಡ ಮೀನುಗಾರನ ರಕ್ಷಣೆ - ಮೀನುಗಾರನ ರಕ್ಷಣೆ

ಲೇಡಿಸ್ ಬೀಚ್​ನಲ್ಲಿ ಮೂರು ದಿನದಿಂದ ಅನ್ನ ನೀರು ಇಲ್ಲದೇ ಅಸ್ವಸ್ತಗೊಂಡು ಸಿಲುಕಿದ್ದ ಮೀನುಗಾರನನ್ನು ಕರಾವಳಿ ಕಾವಲು ಪೊಲೀಸರು ರಕ್ಷಣೆ ಮಾಡಿದ್ದಾರೆ.

fisherman  rescued by karawali kavalu police who trapped in Ladies Beach
ಮೀನುಗಾರನ ರಕ್ಷಣೆ

By

Published : Aug 19, 2021, 10:57 PM IST

ಕಾರವಾರ: ನಗರದ ಬೈತಖೋಲ್ ಸಮೀಪದ ಲೇಡಿಸ್ ಬೀಚ್​ನಲ್ಲಿ ಮೂರು ದಿನದಿಂದ ಅನ್ನ ನೀರು ಇಲ್ಲದೇ ಅಸ್ವಸ್ತಗೊಂಡು ಸಿಲುಕಿದ್ದ ಓರ್ವನನ್ನು ಕರಾವಳಿ ಕಾವಲು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಒಡಿಶಾ ಮೂಲದ ನಿರ್ಮಲ್ ಕುಸಮ್ ರಕ್ಷಣೆಗೊಳಗಾದ ಮೀನುಗಾರ ಎನ್ನಲಾಗಿದೆ. ಸಾಮಾನ್ಯವಾಗಿ ಮೀನುಗಾರರು ಹೊರತುಪಡಿಸಿ ಬೇರೆ ಯಾರೂ ತೆರಳದ ಲೇಡಿಸ್ ಬೀಚ್​​ನಲ್ಲಿ ವ್ಯಕ್ತಿಯೊಬ್ಬ ಯಾವುದೇ ಬೋಟ್​​ ಇಲ್ಲದೇ ಇರುವುದನ್ನು ಗಮನಿಸಿದ ಮೀನುಗಾರರು ಕರಾವಳಿ ಕಾವಲು ಪಡೆಗೆ ತಿಳಿಸಿದ್ದರು. ತಕ್ಷಣ ಕಾರವಾರ ಕರಾವಳಿ ಕಾವಲು ಪಡೆಯ ಸಿಪಿಐ ನಿಶ್ಚಲ್ ಕುಮಾರ್ ನೇತೃತ್ವದ ತಂಡ ತೆರಳಿ ಆತನನ್ನು ಪತ್ತೆ ಮಾಡಿದೆ. ಮೂರು ದಿನದಿಂದ ಆಹಾರ ನೀರು ಇಲ್ಲದೇ ಅಸ್ವಸ್ತನಾಗಿದ್ದ ಆತನನ್ನು ರಕ್ಷಿಸಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ:ಮದ್ಯ ಕೊಳ್ಳುವ ನೆಪದಲ್ಲಿ ಬಂದು ಹಣ ಕದ್ದು ಎಸ್ಕೇಪ್​

ಒರಿಸ್ಸಾ ಮೂಲದ ನಿರ್ಮಲ್ ಕುಸಮ್ ಲೇಡಿಸ್ ಬೀಚ್​​ಗೆ ತೆರಳಿದ್ದು ಹೇಗೆ? ಏಕೆ? ಎಂಬ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ. ಮೀನುಗಾರಿಕೆ ಕೆಲಸಕ್ಕಾಗಿ ಒಡಿಶಾದಿಂದ ಕಾರವಾರಕ್ಕೆ ಬಂದಿರುವುದಾಗಿ ಮಾತ್ರ ಮಾಹಿತಿ ನೀಡಿದ್ದಾನೆ. ಮೂರು ದಿನದ ಹಿಂದೆ ಲೇಡಿಸ್ ಬೀಚ್ ಬಳಿ ಮೀನುಗಾರಿಕೆಗೆ ತೆರಳಿದ್ದಾಗ ಅಲ್ಲಿಯೇ ಉಳಿದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಚೇತರಿಕೆ ಬಳಿಕವೇ ಹೆಚ್ಚಿನ ಮಾಹಿತಿ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details