ಕಾರವಾರ: ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿಯಾಗಿ ಮೀನುಗಾರನೋರ್ವ ಸಮುದ್ರಪಾಲಾಗಿರುವ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಬಳಿ ನಡೆದಿದೆ.
ಅಲೆಯ ಹೊಡೆತಕ್ಕೆ ಮಗುಚಿದ ದೋಣಿ... ಮೀನುಗಾರ ಸಮುದ್ರಪಾಲು - FISHERMAN MISSNG
ಮಳೆಯಿಂದ ರಾಜ್ಯದಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು, ಇತ್ತ ಅಪಾರ ಪ್ರಮಾಣದ ನೀರು ಸಮುದ್ರ ಸೇರುತ್ತಿದೆ. ಈ ಹಿನ್ನೆಲೆ ಸಮುದ್ರ ತನ್ನ ರೌದ್ರಾವತಾರ ತೋರಿಸುತ್ತಿದ್ದು, ಅಲೆಯ ಹೊಡೆತಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೊಬ್ಬ ಸಮುದ್ರದಲ್ಲಿ ನಾಪತ್ತೆಯಾಗಿದ್ದಾನೆ.

ಮೀನುಗಾರ ಸಮುದ್ರಪಾಲು
ಹೊನ್ನಾವರದ ತನ್ವೀರ್(22) ಕಣ್ಮರೆಯಾಗಿರುವ ಮೀನುಗಾರ. ಐದು ಮಂದಿಯ ತಂಡ ಎರಡು ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ದೋಣಿ ಪಲ್ಟಿಯಾದ ಕಾರಣ ಎಲ್ಲರೂ ಸಮುದ್ರಪಾಲಾಗಿದ್ದರು.
ಅದರಲ್ಲಿ ನಾಲ್ವರು ಪುನಃ ದೋಣೆ ಏರಿದ್ದು, ಓರ್ವ ಮೀನುಗಾರ ನಾಪತ್ತೆಯಾಗಿದ್ದಾನೆ. ಇದೀಗ ನಾಪತ್ತೆಯಾದ ಮೀನುಗಾರನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.