ಭಟ್ಕಳ (ಉತ್ತರ ಕನ್ನಡ): ತಡರಾತ್ರಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಬಂದರನಲ್ಲಿ ನಡೆದಿದೆ.
ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು - ಮೀನುಗಾರ ಸಾವು
ಮೃತ ವ್ಯಕ್ತಿ ಮಾವಳ್ಳಿ ಹಂದ್ಕಣಿ ಗ್ರಾಮದ ಕೃಷ್ಣ ಕುಪ್ಪಯ್ಯಗೊಂಡ (44) ಎಂದು ತಿಳಿದು ಬಂದಿದ್ದು, ಇಲ್ಲಿನ ಬಂದರಿನಿಂದ ನವದುರ್ಗೆ ಮೀನುಗಾರಿಕಾ ದೋಣಿಯಲ್ಲಿ ತೆರಳಿದ್ದಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು.
ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
ಮೃತ ವ್ಯಕ್ತಿ ಮಾವಳ್ಳಿ ಹಂದ್ಕಣಿ ಗ್ರಾಮದ ಕೃಷ್ಣ ಕುಪ್ಪಯ್ಯಗೊಂಡ (44) ಎಂದು ತಿಳಿದು ಬಂದಿದ್ದು, ಇವರು ಇಲ್ಲಿನ ಬಂದರಿನಿಂದ ನವದುರ್ಗೆ ಮೀನುಗಾರಿಕಾ ದೋಣಿಯಲ್ಲಿ ತೆರಳಿದ್ದಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು.
ಬೆಳಗ್ಗೆ ತಾಲೂಕಿನ ಮುಂಡಳ್ಳಿಯ ನೆಸ್ತಾರ್ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.