ಭಟ್ಕಳ: ಮುರುಡೇಶ್ವರದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಪಾತಿ ದೋಣಿ ಮಗುಚಿ ಮೀನುಗಾರನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಸಮುದ್ರದಲ್ಲಿ ದೋಣಿ ಮಗುಚಿ ಮೀನುಗಾರ ಸಾವು - Murudeshwar of Bhatkal
ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಪಾತಿ ದೋಣಿ ಮಗುಚಿ ಮೀನುಗಾರ ಮೃತಪಟ್ಟಿದ್ದು, ಈ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೋಣಿ ಮಗುಚಿ ಅರಬ್ಬಿ ಸಮುದ್ರದಲ್ಲಿ ಮೀನುಗಾರ ಸಾವು
ಮಂಜುನಾಥ ನಾರಾಯಣ ಮೃತ ವ್ಯಕ್ತಿ. ಮೃತನ ಸಂಬಂಧಿಕ ಮೀನುಗಾರಿಕೆ ಮುಗಿಸಿ ದಡಕ್ಕೆ ಬಂದ ವೇಳೆ ಪಾತಿದೋಣಿ ದಡದಲ್ಲಿ ಬಿದ್ದಿದ್ದನ್ನು ಗಮನಿಸಿದ್ದಾನೆ.
ಈ ವೇಳೆ ನಾಪತ್ತೆಯಾದವನನ್ನು ಹುಡುಕುತ್ತಿರುವಾಗ ಸಮುದ್ರ ದಡದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.