ಭಟ್ಕಳ (ಉತ್ತರ ಕನ್ನಡ): ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ದೋಣಿ ಮಗುಚಿದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಇಲ್ಲಿನ ವೆಂಕ್ಟಾಪುರದಲ್ಲಿ ನಡೆದಿದೆ.
ಶಿರಾಲಿಯ ಮೊಗೇರ ಕೇರಿ ನಿವಾಸಿಯಾಗಿರುವ ಮೀನುಗಾರ ದುರ್ಗಪ್ಪ ಮೊಗೇರ (75) ಮೃತಪಟ್ಟಿದ್ದಾರೆ. ಈತ ಶಿರಾಲಿಯ ಮೊಗೇರಕೆರಿಂದ ಒಬ್ಬರೇ ಪಾತಿ ದೋಣಿಯಲ್ಲಿ ವೆಂಕ್ಟಾಪುರ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ದೋಣಿ ಮಗುಚಿ ಬಿದ್ದು ಸಾವನ್ನಪ್ಪಿದ್ದಾರೆ.