ಭಟ್ಕಳ: 'ತೌಕ್ತೆ' ಚಂಡಮಾರುತ ಪ್ರಭಾವದಿಂದ ಅರಬ್ಬಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿವೆ. ಭಟ್ಕಳದ ಜಾಲಿಕೋಡಿಯಲ್ಲಿ ನೀರುಪಾಲಾಗುತ್ತಿದ್ದ ದೋಣಿಯನ್ನು ದಡಕ್ಕೆ ತರಲು ಹೋದ ಮೀನುಗಾರ, ಎರಡು ದೋಣಿಗಳ ನಡುವೆ ಸಿಲುಕಿ ಮೃತಪಟ್ಟಿದ್ದಾನೆ.
ಅಲೆಗಳ ಅಬ್ಬರಕ್ಕೆ ಎರಡು ಬೋಟ್ಗಳ ಮಧ್ಯೆ ಸಿಲುಕಿ ಮೀನುಗಾರ ಸಾವು - ಮೀನುಗಾರ ಸಾವು
'ತೌಕ್ತೆ' ಚಂಡಮಾರುತ ಹಿನ್ನೆಲೆ ಭಟ್ಕಳದ ಜಾಲಿಕೋಡಿಯಲ್ಲಿ ನೀರುಪಾಲಾಗುತ್ತಿದ್ದ ದೋಣಿಯನ್ನು ದಡಕ್ಕೆ ತರಲು ಹೋದ ಮೀನುಗಾರ, ಎರಡು ದೋಣಿಗಳ ನಡುವೆ ಸಿಲುಕಿ ಮೃತಪಟ್ಟಿದ್ದಾನೆ.
![ಅಲೆಗಳ ಅಬ್ಬರಕ್ಕೆ ಎರಡು ಬೋಟ್ಗಳ ಮಧ್ಯೆ ಸಿಲುಕಿ ಮೀನುಗಾರ ಸಾವು cyclone](https://etvbharatimages.akamaized.net/etvbharat/prod-images/768-512-02:40:45:1621069845-kn-bkl-01-the-death-of-a-fisherman-caught-between-two-boats-in-the-wake-of-the-waves-kac-10002-15052021143851-1505f-1621069731-1068.jpg)
cyclone
ಜಾಲಿಕೋಡಿ ನಿವಾಸಿ ಲಕ್ಷ್ಮಣ ಈರಪ್ಪ ನಾಯ್ಕ (60) ಮೃತರು. ದಡದಲ್ಲಿ ಲಂಗರು ಹಾಕಿದ್ದ ದೋಣಿಯೊಂದು ಅಲೆಗಳ ಹೊಡೆಕ್ಕೆ ನೀರುಪಾಲಾಗುತ್ತಿತ್ತು. ಅದನ್ನು ತಡೆದು ದಡದಿಂದ ಮೇಲೆ ತರಲು ಮೀನುಗಾರ ನೀರಿಗೆ ಇಳಿದಿದ್ದಾನೆ. ಆಗ ಅಪ್ಪಳಿಸಿದ ಅಲೆಗೆ ಮತ್ತೊಂದು ದೋಣಿಯು ಆತನನ್ನು ದಡದಿಂದ ಮೇಲೆ ತರಬೇಕಿದ್ದ ದೋಣಿಯ ನಡುವೆ ಸಿಲುಕಿಸಿದೆ. ಗಂಭೀರವಾಗಿ ಗಾಯಗೊಂಡ ಆತ ಅಸುನೀಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.