ಕಾರವಾರ :ಸಾಂಪ್ರದಾಯಿಕ ಮೀನುಗಾರಿಕೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲೂಕು ಯುವ ಮೀನುಗಾರರ ಸಂಘರ್ಷ ಸಮಿತಿ ಏ.17ರಂದು ಗಾಳ ಹಾಕಿ 'ಮೀನು ಹಿಡಿಯುವ ಸ್ಪರ್ಧೆ' ಆಯೋಜಿಸಿದೆ. ಕಾರವಾರದ ಸಚಿನ್ ಜುವೆಲ್ಲರ್ಸ್ ಸ್ಪರ್ಧೆಯ ಪಾಯೋಜಕತ್ವ ವಹಿಸಿದೆ. ಬೈತಖೋಲ ಮೀನುಗಾರಿಕೆ ಬಂದರು ಸಮೀಪವಿರುವ ಬ್ರೇಕ್ ವಾಟರ್ನ ಎರಡೂ ದಂಡೆಯಲ್ಲಿ ಈ ಸ್ಪರ್ಧೆ ನಡೆಯಲಿದೆ.
ಸಾಮಾನ್ಯ ಗಾಳ ಮತ್ತು ರೇಡಿಯಂ ಗಾಳ ಎರಡು ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು 250 ರೂ. ಪ್ರವೇಶ ಶುಲ್ಕದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಾಳುಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಗಾಳ ಹಾಕುವ ಸ್ಫರ್ಧೆ ನಡೆಯಲಿದೆ. ಮೀನುಗಳ ಸಂಖ್ಯೆ, ತೂಕದ ಆಧಾರದ ಮೇಲೆ ವಿವಿಧ ಬಹುಮಾನಗಳನ್ನು ನೀಡಲಾಗುತ್ತದೆ.