ಕರ್ನಾಟಕ

karnataka

ETV Bharat / state

ಶಿರಸಿಯ ಮೀನುಗಾರಿಕಾ ಇಲಾಖೆಯಲ್ಲಿ ಆರಂಭವಾದ ಮೀನು ಸಾಕಾಣಿಕೆ! - Shirasi

ಶಿರಸಿಯ ಎಸ್​ಬಿಐ ಬ್ಯಾಂಕ್​​ ಪಕ್ಕದಲ್ಲಿರುವ ಮೀನುಗಾರಿಕಾ ಇಲಾಖೆಯಲ್ಲಿ ಮೀನು ಸಾಕಾಣಿಕೆಗೆ ಸಾಕಷ್ಟು ತಯಾರಿ ನಡೆಸಲಾಗುತ್ತಿದ್ದು, ಒಟ್ಟೂ 8 ಟ್ಯಾಂಕ್​​ಗಳಲ್ಲಿ 5 ಲಕ್ಷ ಮೀನು ಮರಿಗಳನ್ನು ಬೆಳೆಸಲು ಇಲಾಖೆ ಮುಂದಾಗಿದೆ‌.

Shirasi
ಮೀನು ಸಾಕಾಣಿಕೆ

By

Published : Jul 8, 2020, 1:13 AM IST

ಶಿರಸಿ:ಮಳೆ ಹನಿಗಳು ಬೀಳುತ್ತಿದ್ದಂತೆ ನಗರದ ಮೀನುಗಾರಿಕಾ ಇಲಾಖೆಯಲ್ಲಿಯೂ ಮೀನು ಸಾಕಲು ತಯಾರಿ ಪ್ರಾರಂಭವಾಗಿದ್ದು, ಸುಮಾರು 5 ಲಕ್ಷ ಮೀನಿನ ಮರಿಗಳನ್ನು ತಂದು ಬೆಳೆಸಲಾಗುತ್ತಿದೆ.

ಇಲ್ಲಿನ ಎಸ್​ಬಿಐ ಬ್ಯಾಂಕ್ ಪಕ್ಕದಲ್ಲಿರುವ ಮೀನುಗಾರಿಕಾ ಇಲಾಖೆಯಲ್ಲಿ ಮೀನು ಸಾಕಾಣಿಕೆಗೆ ಸಾಕಷ್ಟು ತಯಾರಿ ನಡೆಸಲಾಗುತ್ತಿದೆ. ಒಟ್ಟು 8 ಟ್ಯಾಂಕ್​​ಗಳಲ್ಲಿ 5 ಲಕ್ಷ ಮೀನು ಮರಿಗಳನ್ನು ಬೆಳೆಸಲು ಇಲಾಖೆ ಮುಂದಾಗಿದೆ‌.

ಶಿರಸಿಯ ಮೀನುಗಾರಿಕಾ ಇಲಾಖೆಯಲ್ಲಿ ಆರಂಭವಾದ ಮೀನು ಸಾಕಾಣಿಕೆ.

ಮೀನುಗಾರಿಕಾ ಪ್ರದೇಶ ಅಲ್ಲದೇ ಹೋದರೂ ಇಲಾಖೆಯ ಅಡಿಯಲ್ಲಿ 17 ಕೆರೆಗಳು ಬರುವ ಕಾರಣ ಮೀನು ಕೃಷಿ ಚಟುವಟಿಕೆಗಳು ಪ್ರತಿ ವರ್ಷವೂ ಜೋರಾಗಿ ನಡೆಯುತ್ತದೆ. ಭದ್ರ ಆಣೆಕಟ್ಟಿನಿಂದ ಕಟ್ಲಾ ಹಾಗೂ ಸಾಮಾನ್ಯ ಗೆಂಡೆ ಎಂಬ ಮೀನಿನ ತಳಿಗಳ ಮರಿಗಳನ್ನು ತಂದು ಇಲ್ಲಿ ಬೆಳೆಸುವ ಕಾರ್ಯ ನಡೆಯುತ್ತಿದ್ದು, ಅಲ್ಲಿಂದ ಮೀನುಗಳನ್ನು ತಂದು ಶೇ.30 ರಷ್ಟು ಇಲಾಖೆಗೆ ಮರಳಿಸಬೇಕಾಗುತ್ತದೆ. ಉಳಿದಂತೆ ಇಲ್ಲಿನ ಮೀನು ಕೃಷಿ ಮಾಡುವ ರೈತರಿಗೆ ವಿತರಣೆ ಮಾಡಲಾಗುತ್ತದೆ.

ಒಟ್ಟಾರೆಯಾಗಿ ಇಲಾಖೆ 2 ಲಕ್ಷ ಮೀನಿನ ಮರಿಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದು, ಕಳೆದ ವರ್ಷ 2.70 ಲಕ್ಷ ಮೀನಿನ ಮರಿಗಳನ್ನು ಮಾರಾಟ ಮಾಡಲಾಗಿತ್ತು.

ABOUT THE AUTHOR

...view details