ಕರ್ನಾಟಕ

karnataka

ETV Bharat / state

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬ್ಲ್ಯಾಕ್ ಫಂಗಸ್ ಪತ್ತೆ: ಸೋಂಕಿತ ಮಂಗಳೂರಿಗೆ ರವಾನೆ - Uttara Kannada district

ಕೊರೊನಾ ಪ್ರಕರಣಗಳಿಂದ ತತ್ತರಿಸಿರುವ ಉತ್ತರ ಕನ್ನಡ ಜಿಲ್ಲೆಯಲ್ಲೀಗ ಮೊದಲ ಬ್ಲ್ಯಾಕ್​ ಫಂಗಸ್​ ಪ್ರಕರಣ ಪತ್ತೆಯಾಗಿದೆ. ಮಲೆನಾಡು ಭಾಗದ ದಾಂಡೇಲಿಯಲ್ಲಿ ಈ ಸೋಂಕಿತ ಪತ್ತೆಯಾಗಿದ್ದಾನೆ.

 Black fungus detected in Uttara Kannada district
Black fungus detected in Uttara Kannada district

By

Published : May 23, 2021, 7:19 PM IST

ಶಿರಸಿ: ಉತ್ತರಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗುವ ಮೂಲಕ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

ಜಿಲ್ಲೆಯ ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ಕೊರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಕಣ್ಣು ಊದಿಕೊಂಡಿತ್ತು. ನಂತರ ವೈದ್ಯರು ತಪಾಸಣೆ ನಡೆಸಿದ್ದು, ಬ್ಲ್ಯಾಕ್ ಪಂಗಸ್ ಇರುವುದನ್ನು ದೃಢಪಡಿಸಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಈತನನ್ನು ಮಂಗಳೂರಿಗೆ ರವಾನಿಸಲಾಗಿದೆ. ಸದ್ಯ ಮಲೆನಾಡು ಭಾಗದ ದಾಂಡೇಲಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಕರಾವಳಿ ಭಾಗದಲ್ಲಿ ಈವರೆಗೆ ಯಾವುದೇ ಬ್ಲ್ಯಾಕ್ ಫಂಗಸ್ ಸೋಂಕಿನ ಪ್ರಕರಣ ವರದಿಯಾಗಿಲ್ಲ.

ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ :

ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಹ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಲಾಕ್ ಡೌನ್, ಕಠಿಣ ನಿಯಮ ಜಾರಿ ಮಾಡಿದರೂ ದಾಂಡೇಲಿ ತಾಲೂಕಿನಲ್ಲಿ ಇಂದು 43 ಜನರಿಗೆ ಪಾಸಿಟಿವ್ ವರದಿಯಾಗಿದೆ. ಈವರೆಗೆ 1916ಜನ ಕೊರೊನಾ ಸೋಂಕಿತರಾಗಿದ್ದು, 60 ಜನ ಮೃತಪಟ್ಟಿದ್ದಾರೆ. ಸದ್ಯ 385 ಸಕ್ರಿಯ ಕೇಸ್ ಗಳಿದ್ದು ಅತೀ ಚಿಕ್ಕ ತಾಲೂಕಿನಲ್ಲಿ ಸೋಂಕು ಹೆಚ್ಚಾಗುವ ಜೊತೆ ಇದೀಗ ಬ್ಲ್ಯಾಕ್ ಫಂಗಸ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ABOUT THE AUTHOR

...view details