ಕಾರವಾರ: ಯಾರೋ ಹಚ್ಚಿದ ಬೆಂಕಿಯ ಕಿಡಿಯಿಂದ 5 ಎಕರೆ ಗುಡ್ಡ ಪ್ರದೇಶ ಬೆಂಕಿಗಾಹುತಿಯಾದ ಘಟನೆ ಕಾರವಾರದ ಬೈತಖೋಲ್ ಬಳಿ ನಡೆದಿದೆ.
ಇಲ್ಲಿನ ಬಂದರು ಬಳಿಯ ಗುಡ್ಡದಲ್ಲಿ ಯಾರೋ ಕಿಡಿಗೇಡಿಗಳು ಗುಡ್ಡದ ಕೆಳಭಾಗದಲ್ಲಿ ಹಚ್ಚಿದ್ದ ಬೆಂಕಿಯು ಒಣ ಹುಲ್ಲುಗಳಿಗೆ ವ್ಯಾಪಿಸಿ, ಗುಡ್ಡದ ತುದಿಯವರೆಗೂ ಹೊತ್ತಿಕೊಂಡಿದೆ. ಇದರಿಂದ ಸಣ್ಣ ಪುಟ್ಟ ಗಿಡ ಮರಗಳು ಸೇರಿದಂತೆ ಬಿದರಿನ ಮಟ್ಟಿಗೆ ಹೊತ್ತಿದ್ದರಿಂದ ಸುಮಾರು 5 ಎಕರೆಗೂ ಅಧಿಕ ಪ್ರದೇಶ ಸುಟ್ಟು ಕರಕಲಾಗಿದೆ.
ಕಿಡಿಗೇಡಿಗಳು ಹೊತ್ತಿಸಿದ ಕಿಡಿಯಿಂದ 5 ಎಕರೆ ಗುಡ್ಡ ಪ್ರದೇಶ ಬೆಂಕಿಗಾಹುತಿ ಬೆಂಕಿ ಬಿದರಿಗೆ ಹತ್ತಿದ್ದರಿಂದ ದೊಡ್ಡದಾಗಿ ಸುತ್ತಮುತ್ತಲಿನ ಪ್ರದೇಶಗಳಿಗೆ ಆವರಿಸಿದ್ದು, ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಈಗಾಗಲೆ ನೀರು ಹಾಯಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಲಾಗಿದೆ.ಇನ್ನು ಬೆಂಕಿ ಜ್ವಾಲೆ ಜೋರಾಗಿರುವುದರಿಂದ ಹತ್ತಿರದಲ್ಲಿರುವ ಮನೆಗಳ ಜನರು ಆತಂಕಗೊಂಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು, ಸಿಬ್ಬಂದಿ ಮೂಲಕ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.