ಕಾರವಾರ (ಉತ್ತರ ಕನ್ನಡ): ಹುಲ್ಲು ತುಂಬಿಕೊಂಡು ತೆರಳುತ್ತಿದ್ದ ಬೊಲೆರೊ ವಾಹನಕ್ಕೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡ ಘಟನೆ ಅಂಕೋಲಾ ತಾಲೂಕಿನ ತಳಗದ್ದೆಯಲ್ಲಿ ಇಂದು ನಡೆದಿದೆ. ಆನಲೆ ಗ್ರಾಮದಿಂದ ಖಂಡಗಾರಿಗೆ ತೆರಳುವಾಗ ಮಾರ್ಗಮಧ್ಯೆ ವಿದ್ಯುತ್ ತಂತಿ ವಾಹನದಲ್ಲಿದ್ದ ಹುಲ್ಲಿಗೆ ತಾಗಿದ್ದು ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಅಗ್ನಿಯ ಜ್ವಾಲೆ ಹುಲ್ಲಿನ ಮೂಲಕ ಇಡೀ ವಾಹನಕ್ಕೆ ಆವರಿಸಿದೆ.
ವಿದ್ಯುತ್ ತಂತಿ ಸ್ಪರ್ಶ: ಹುಲ್ಲುಸಮೇತ ಸುಟ್ಟು ಕರಕಲಾದ ಬೊಲೆರೊ ವಾಹನ - fire on Bolero vehicle
ಬೊಲೆರೊ ವಾಹನಕ್ಕೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿತು. ಪರಿಣಾಮ, ಇಡೀ ವಾಹನ ಸುಟ್ಟು ಕರಕಲಾಗಿದೆ.
ಹೊತ್ತಿ ಉರಿದ ಬೊಲೆರೊ ಗಾಡಿ
ಇದನ್ನೂ ಓದಿ:ಬೆಂಗಳೂರು: ಹ್ಯಾಶಿಶ್ ಆಯಿಲ್ ದಂಧೆ ಬಯಲಿಗೆಳೆದ ಎನ್.ಸಿ.ಬಿ
ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ತಿಳಿಸಿ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.