ಶಿರಸಿ:ವಿದ್ಯುತ್ ಲೈನ್ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿಕೊಂಡ ಬೆಂಕಿ, ಹತ್ತಿರದ ಹುಲ್ಲಿನ ಬಣವೆಗೆ ತಾಗಿ ಸಂಪೂರ್ಣ ಬಣವೆ ಸುಟ್ಟು ಹೋದ ಘಟನೆ ಯಲ್ಲಾಪುರ ತಾಲೂಕಿನ ಕವಡಿಕೆರೆ ಬಳಿ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹುಲ್ಲಿನ ಬಣವೆಗೆ ಬೆಂಕಿ - uttarkannada news
ವಿದ್ಯುತ್ ಲೈನ್ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿಕೊಂಡ ಬೆಂಕಿ, ಹತ್ತಿರದ ಹುಲ್ಲಿನ ಬಣವೆಗೆ ತಾಗಿ ಸಂಪೂರ್ಣ ಬಣವೆ ಸುಟ್ಟು ಹೋದ ಘಟನೆ ಯಲ್ಲಾಪುರ ತಾಲೂಕಿನ ಕವಡಿಕೆರೆ ಬಳಿ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹುಲ್ಲಿನ ಬಣವೆಗೆ ಬೆಂಕಿ!
ಕವಡಿಕೆರೆಯ ಸುಬ್ರಾಯ ಭಟ್ಟ ಎಂಬುವರಿಗೆ ಸೇರಿದ ಹುಲ್ಲಿನ ಬಣವೆ ಸಮೀಪವಿದ್ದ ವಿದ್ಯುತ್ ಲೈನ್‍ಗೆ ಪಕ್ಕದ ಮರದ ಟೊಂಗೆ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಸಂಭವಿಸಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಗ್ರಾಮಸ್ಥರ ನೆರವಿನೊಂದಿಗೆ ಬೆಂಕಿ ನಂದಿಸಿದ್ದಾರೆ.
ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.