ಶಿರಸಿ:ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಏಕಾಏಕಿ ಮನೆ ಹಾಗೂ ಅದಕ್ಕೆ ಹೊಂದಿಕೊಂಡಿದ್ದ ಕಿರಾಣಿ ಅಂಗಡಿ ಹೊತ್ತಿ ಉರಿದು ಲಕ್ಷಾಂತರ ರೂಪಾಯಿ ಹಾನಿಯುಂಟಾದ ಘಟನೆ ತಾಲೂಕಿನ ಸೋಂದಾ ಕರ್ಕೋಡಿನಲ್ಲಿ ಸಂಭವಿಸಿದೆ.
ಅಗ್ನಿ ಅವಘಡದಿಂದ ಮನೆ, ಕಿರಾಣಿ ಅಂಗಡಿ ಸುಟ್ಟು ಭಸ್ಮ: ಅಪಾರ ಹಾನಿ
ಮೊದಲು ಮನೆಯೊಳಗೆ ವಿದ್ಯುತ್ ವೈರಿಂಗ್ನಲ್ಲಿ ಬೆಂಕಿ ಕಾಣಿಸಿಕೊಂಡು ನೋಡನೋಡುತ್ತಲೇ ಅಂಗಡಿ ಮತ್ತು ಮಹಡಿವರೆಗೂ ವ್ಯಾಪಿಸಿಕೊಂಡಿದೆ. ಮೀಟರ್ ಬೋರ್ಡ್ ಸಹಿತ ಇಡೀ ಮನೆಯ ವೈರಿಂಗ್ ಸಂಪೂರ್ಣ ಕರಕಲಾಗಿದ್ದು, ಟಿವಿ, ಝೆರಾಕ್ಸ್ ಮಷಿನ್, ಫ್ರಿಡ್ಜ್ ಸುಟ್ಟು ಹೋಗಿವೆ.
ಈ ಅವಘಡದಿಂದ ಮಾಲೀಕ ಗೋಪಾಲ ಹರಿ ನಾಯ್ಕರಿಗೆ ದುರದೃಷ್ಟದ ದೀಪಾವಳಿಯಾಗಿ ಪರಿಣಮಿಸಿದೆ. ಮೊದಲು ಮನೆಯೊಳಗೆ ವಿದ್ಯುತ್ ವೈರಿಂಗ್ನಲ್ಲಿ ಬೆಂಕಿ ಕಾಣಿಸಿಕೊಂಡು ನೋಡನೋಡುತ್ತಲೇ ಅಂಗಡಿ ಮತ್ತು ಮಹಡಿವರೆಗೂ ವ್ಯಾಪಿಸಿಕೊಂಡಿದೆ. ಮೀಟರ್ ಬೋರ್ಡ್ ಸಹಿತ ಇಡೀ ಮನೆಯ ವೈರಿಂಗ್ ಸಂಪೂರ್ಣ ಕರಕಲಾಗಿದ್ದು, ಟಿವಿ, ಝೆರಾಕ್ಸ್ ಮಷಿನ್, ಫ್ರಿಡ್ಜ್ ಸುಟ್ಟು ಹೋಗಿವೆ. ಎಲ್ಲರ ಬಟ್ಟೆ, ಕಾಳು-ಕಡ್ಡಿ ಅಗ್ನಿಗೆ ಆಹುತಿಯಾಗಿದ್ದು, ಮಾಲೀಕ ಗೋಪಾಲ ಅವರ ಪ್ಯಾಂಟ್ ಕಿಸೆಯಲ್ಲಿದ್ದ 50 ಸಾವಿರ ನಗದು ಕೂಡ ಸುಟ್ಟು ಹೋಗಿದೆ.
ಅಂಗಡಿಯೊಳಗಿನ ಕಿರಾಣಿ ಮತ್ತಿತರ ಸಾಮಾನು ಸುಟ್ಟಿದೆ ಎಂದು ಹೇಳಲಾಗಿದ್ದು, ಅಗ್ನಿಯ ಪ್ರಕೋಪಕ್ಕೆ ಕಿಟಕಿಯ ಸರಳು, ಮೇಲ್ಛಾವಣಿಯ ತಗಡುಗಳು ಕರಗಿಹೋಗಿವೆ. ಸುಮಾರು 10 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಜನ ಸೇರಿ ನಂದಿಸುವ ಪ್ರಯತ್ನ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ಆರಿಸಿದರು. ಅಷ್ಟರೊಳಗಾಗಿ ಬಹಳಷ್ಟು ಹಾನಿಯಾಗಿತ್ತು. ಸ್ಥಳಕ್ಕೆ ಉಪ ತಹಶೀಲ್ದಾರ್, ಹೆಸ್ಕಾಂ ಅಧಿಕಾರಿಗಳು, ಜನಪ್ರತಿನಿಧಿಗಳು ಆಗಮಿಸಿ ಪರಿಶೀಲನೆ ನಡೆಸಿದರು.