ಕರ್ನಾಟಕ

karnataka

ETV Bharat / state

ಫ್ಲೆಕ್ಸ್ ಪ್ರಿಂಟರ್ ಮಳಿಗೆಗೆ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲು - ಕಾರವಾರದಲ್ಲಿ ಅಗ್ನಿ ಅವಘಡ

ಹೊನ್ನಾವರ ಪಟ್ಟಣದ ಫ್ಲೆಕ್ಸ್ ಪ್ರಿಂಟರ್ ಮಳಿಗೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು‌ಗಳು ಸುಟ್ಟು ಕರಕಲಾಗಿವೆ.

fire accident in flex printing shop
ಫ್ಲೆಕ್ಸ್ ಪ್ರಿಂಟರ್ ಮಳಿಗೆಗೆ ಬೆಂಕಿ

By

Published : Dec 5, 2020, 2:34 AM IST

ಕಾರವಾರ: ಫ್ಲೆಕ್ಸ್ ಪ್ರಿಂಟರ್ ಮಳಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು‌ಗಳು ಸುಟ್ಟು ಕರಕಲಾದ ಘಟನೆ ಹೊನ್ನಾವರ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಗಣಪತಿ ಪ್ಲೆಕ್ಸ್ ಪ್ರಿಂಟರ್​ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊಗೆಯಿಂದ ಆವೃತ್ತಗೊಂಡಿತ್ತು. ಸ್ಥಳೀಯರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿ, ಬೆಂಕಿ ನಂದಿಸಲು ಪ್ರಯತ್ನಿಸಿದ್ದರಾದರೂ ಪ್ರಯೋಜನವಾಗಲಿಲ್ಲ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಫ್ಲೆಕ್ಸ್ ಪ್ರಿಂಟರ್ ಮಳಿಗೆಗೆ ಬೆಂಕಿ

ಬೆಂಕಿ ಆರಿಸುವಷ್ಟರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರಗಳು ಹಾಗೂ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಸ್ಥಳಕ್ಕೆ ಹೊನ್ನಾವರ ಪಿಎಸ್​ಐ ಶಶಿಕುಮಾರ್, ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details