ಶಿರಸಿ: ಉತ್ತರ ಕನ್ನಡದ ಮುಂಡಗೋಡ ಪಟ್ಟಣದ ಹೊರ ವಲಯದಲ್ಲಿರುವ ಅಮ್ಮಾಜಿ ಕೆರೆಯಲ್ಲಿ ಹಾರುವ ಪಕ್ಷಿಯಂತೆ ರೆಕ್ಕೆ ಹಾಗೂ ಮುಳ್ಳು ಇರುವ ವಿಚಿತ್ರ ಆಕಾರದ ಮೀನು ಸಿಕ್ಕಿದ್ದು, ಜನರಲ್ಲಿ ಆಶ್ಚರ್ಯ ಮೂಡಿಸಿದೆ.
ಹಾರುವ ಹಕ್ಕಿಯಂತಿರುವ ವಿಚಿತ್ರ ಮೀನು ಪತ್ತೆ - undefined
ವ್ಯಾಪಾರಸ್ಥರು ಸಾಮಾನ್ಯವಾಗಿ ಅಮ್ಮಾಜಿ ಕೆರೆಯಿಂದ ಮೀನು ಹಿಡಿದು ಇಲ್ಲಿನ ಮಾರುಕಟ್ಟೆಗೆ ತಂದಾಗ ಕಟ್ಲಾ, ಕಾಂಡಿ, ಗೌರಿ ಸೇರಿದಂತೆ ಕೆರೆಯಲ್ಲಿ ಸಿಗುವ ವಿವಿಧ ಜಾತಿಯ ಮೀನು ತರುವರು. ಆದರೆ ಎಲ್ಲ ಮೀನುಗಳ ಮಧ್ಯೆ ಏಕೈಕ ವಿಶೇಷ ಆಕಾರವುಳ್ಳ ಮೀನು ಸಿಕ್ಕಿದೆ.
![ಹಾರುವ ಹಕ್ಕಿಯಂತಿರುವ ವಿಚಿತ್ರ ಮೀನು ಪತ್ತೆ](https://etvbharatimages.akamaized.net/etvbharat/prod-images/768-512-3812869-154-3812869-1562861528418.jpg)
ವಿಚಿತ್ರ ಮೀನು
ವ್ಯಾಪಾರಸ್ಥರು ಸಾಮಾನ್ಯವಾಗಿ ಅಮ್ಮಾಜಿ ಕೆರೆಯಿಂದ ಕಟ್ಲಾ, ಕಾಂಡಿ, ಗೌರಿ ಸೇರಿದಂತೆ ಕೆರೆಯಲ್ಲಿ ಸಿಗುವ ವಿವಿಧ ಜಾತಿಯ ಮೀನು ತರುತ್ತಾರೆ. ಆದರೆ ಈ ಎಲ್ಲಾ ಮೀನುಗಳ ಮಧ್ಯೆ ಏಕೈಕ ವಿಶೇಷ ಆಕಾರವುಳ್ಳ ಮೀನು ಸಿಕ್ಕಿದೆ.
ನೋಡುಗರ ಕಣ್ಮನ ಸೆಳೆಯುವಂತಿದ್ದ ಈ ಮೀನು ಪಟ್ಟಣ ಮೀನು ಮಾರುಕಟ್ಟೆಯಲ್ಲಿ ಒಂದು ಪ್ರದರ್ಶನದ ವಸ್ತುವಾಗಿತ್ತಲ್ಲದೇ ದಿನವಿಡೀ ಈ ಮೀನಿನದ್ದೇ ಚರ್ಚೆಯಾಗಿತ್ತು. ಆದರೆ ಜೀವ ಉಳ್ಳ ಈ ಮೀನನ್ನು ಯಾರು ಕೂಡ ಖರೀದಿಸಲು ಮುಂದಾಗದೇ ಇದ್ದಾಗ ಕೊನೆಯಲ್ಲಿ ಅದೇ ಕೆರೆಗೆ ತೆಗೆದುಕೊಂಡು ಹೋಗಿ ಬಿಡಲಾಯಿತು.