ಕರ್ನಾಟಕ

karnataka

ETV Bharat / state

ಕರಾವಳಿಯಲ್ಲಿ ರೆಡ್ ಅಲರ್ಟ್ ; ಲಂಗರು ಹಾಕಿದ ಬೋಟ್​ಗಳು - ಕಾರವಾರ ಮಳೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಆಳ ಸಮುದ್ರ ಮೀನುಗಾರಿಕಾ ಬೋಟುಗಳು ಮೀನುಗಾರಿಕೆ ಸ್ಥಗಿತಗೊಳಿಸಿ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದಿವೆ.

boats
ಬೋಟ್​ಗಳು

By

Published : Oct 15, 2020, 3:40 PM IST

ಕಾರವಾರ: ಕರಾವಳಿಯಲ್ಲಿ ಇಂದೂ ಸಹ ರೆಡ್ ಅಲರ್ಟ್ ಮುಂದುವರಿಕೆಯಾದ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ ಬಂದರಿಗೆ ರಾಜ್ಯ ಹಾಗೂ ಹೊರ ರಾಜ್ಯದ ಮೀನುಗಾರಿಕಾ ಬೋಟುಗಳು ವಾಪಸಾಗಿವೆ.

ಕಾರವಾರ ಬಂದರಿನಲ್ಲಿ ಇರುವ ಬೋಟ್​ಗಳು

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಆಳ ಸಮುದ್ರ ಮೀನುಗಾರಿಕಾ ಬೋಟುಗಳು ಮೀನುಗಾರಿಕೆ ಸ್ಥಗಿತಗೊಳಿಸಿ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದಿವೆ. ಕಾರವಾರದ ಬಂದರು ಪ್ರದೇಶದಲ್ಲಿ ಮಲ್ಪೆ, ಉಡುಪಿ ಹಾಗೂ ಹೊರರಾಜ್ಯ ಗೋವಾ, ಕೇರಳ, ತಮಿಳುನಾಡು ಭಾಗದ ಬೋಟುಗಳು ಸಹ ಲಂಗರು ಹಾಕಿ ನಿಂತಿವೆ.

ನಿನ್ನೆಯಿಂದ ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ಜಿಲ್ಲೆಯ ಕಾರವಾರ, ಅಂಕೋಲಾ, ಹೊನ್ನಾವರ ಹಾಗೂ ಘಟ್ಟದ ಮೇಲಿನ ತಾಲ್ಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಲ್ಲೂ ಸಹ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಆದರೆ ಇಂದು ಕೊಂಚ ಬಿಡುವ ನೀಡಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ.

ABOUT THE AUTHOR

...view details