ಕಾರವಾರ: ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ಅಂತ್ಯ ಸಂಸ್ಕಾರವನ್ನು ಮಗಳೇ ನೆರವೇರಿಸಿದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆಯಲ್ಲಿ ನಡೆದಿದೆ.
ಕಾರವಾರದಲ್ಲಿ ಸಂಪ್ರದಾಯಕ್ಕೆ ಸೆಡ್ಡು: ತಂದೆಯ ಚಿತೆಗೆ ಮಗಳಿಂದ ಅಗ್ನಿ ಸ್ಪರ್ಶ! - Kurnipete village
ಗಂಡು ಸಂತಾನವಿಲ್ಲದ ಕಾರಣ ತಂದೆಯ ಚಿತೆಗೆ ಮಗಳು ಅಗ್ನಿ ಸ್ಪರ್ಶ ಮಾಡಿರುವ ಪ್ರಸಂಗ ಕಾರವಾರ ತಾಲೂಕಿನಲ್ಲಿ ನಡೆದಿದೆ.

ತಂದೆಯ ಚಿತೆಗೆ ಮಗಳಿಂದ ಅಗ್ನಿ ಸ್ಪರ್ಶ
ತಂದೆಯ ಚಿತೆಗೆ ಮಗಳಿಂದ ಅಗ್ನಿ ಸ್ಪರ್ಶ
ಕುರ್ನಿಪೇಟೆಯ ಚಂದ್ರಕಾಂತ ಬುದೊ ಪಾಗಿ (56) ಹೃದಯಾಘಾತದಿಂದ ಮೃತಪಟ್ಟಿದ್ದರು. ಒಂಭತ್ತು ಜನ ಹೆಣ್ಣು ಮಕ್ಕಳನ್ನು ಹೊಂದಿರುವ ಮೃತರಿಗೆ ಗಂಡು ಸಂತಾನವಿರಲಿಲ್ಲ.
ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳೇ ವಿಧಿ ವಿಧಾನ ನೆರವೇರಿಸುವ ಪದ್ಧತಿ ಜಾರಿಯಲ್ಲಿದೆಯಾದರೂ ನಾಲ್ಕನೇ ಮಗಳು ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ.