ಕರ್ನಾಟಕ

karnataka

ETV Bharat / state

ಗೋಕರ್ಣ ಕಡೆ ಬಂದು ಆಂಧ್ರ ಮೂಲದ ತಂದೆ-ಮಗ ಆತ್ಮಹತ್ಯೆ - ಆತ್ಮಹತ್ಯೆ

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತಂದೆ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆ ಮಗ ಆತ್ಮಹತ್ಯೆ
ತಂದೆ ಮಗ ಆತ್ಮಹತ್ಯೆ

By

Published : Dec 30, 2022, 8:49 PM IST

ಕಾರವಾರ: ಆತ್ಮಹತ್ಯೆಗೆ ಯತ್ನಿಸಿದ್ದ ತಂದೆ ಮತ್ತು ಮಗ ಇಲ್ಲಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಗಂಗರಾಜು ವೆಕಂಟ ನಾಗಾ ನರಸಿಂಹ ರಾಘವ ದಿನಕರ ( 41) ಮತ್ತು ಮಗ ಗಂಗರಾಜು ವ್ಯಾಗ್ರೇಶ್ವರ ಕಾರ್ತಿಕೇಯ ತರುಣ (15) ಆತ್ಮಹತ್ಯೆಗೆ ಶರಣಾದವರು.

ಆಂಧ್ರಪ್ರದೇಶದ ಸಹೋದರಿ ಮನೆಯಲ್ಲಿ ವಾಸವಿದ್ದ ಈ ಇಬ್ಬರು ಇತ್ತೀಚೆಗೆ ಗೋಕರ್ಣ ಕಡೆಗೆ ಬಂದಿದ್ದರು. ಆದರೆ ಯಾವುದೋ ವಿಷಯವನ್ನು ಇಬ್ಬರೂ ಮನಸ್ಸಿಗೆ ಹಚ್ಚಿಕೊಂಡಿದ್ದರು ಎನ್ನಲಾಗಿದೆ. ಗೋಕರ್ಣದಿಂದ ಅಂಕೋಲಾಗೆ ತೆರಳುವಾಗ ಬಸ್ಸಿನಲ್ಲಿ ಇಬ್ಬರೂ ವಿಷ ಮಿಶ್ರಿತ ಆಹಾರ ಸೇವಿಸಿದ್ದರು. ಬಳಿಕ ಅಂಕೋಲಾ ಬಸ್ ನಿಲ್ದಾಣದ ಹತ್ತಿರ ಇಬ್ಬರೂ ವಾಂತಿ ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಹುಬ್ಬಳ್ಳಿಯಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ತಂದೆ ಡಿ.27ರಂದು ಮತ್ತು ಮಗ ಡಿ.28 ರಂದು ಮೃತಪಟ್ಟಿದ್ದಾರೆ. ಮೃತನ ಸಹೋದರಿ ಆಚ್ಚಂಟ ಪದ್ಮಜಾ ಅಂಕೋಲಾ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅತ್ತಿಗೆಯೊಂದಿಗೆ ಕಲಹ: ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆತ್ಯಹತ್ಯೆ

ABOUT THE AUTHOR

...view details