ಕರ್ನಾಟಕ

karnataka

ETV Bharat / state

ಪತಿಯಿಂದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ.. ಪ್ರಾಣಾಪಾಯದಿಂದ ಪಾರು.. - ಪ್ರೀತಿ ಕುಡ್ತಲಕರ್ ಹಲ್ಲೆಗೊಳಗಾದ ಮಹಿಳೆ

ಕತ್ತಿಯಿಂದ ಹಲ್ಲೆ ನಡೆಸಿ ಪತಿಯೇ ಪತ್ನಿಯ ಹತ್ಯೆಗೆ ಯತ್ನಿಸಿರುವ ಘಟನೆ ಕಾರವಾರ ತಾಲೂಕಿನ ಬಸುಣಗ ಗ್ರಾಮದಲ್ಲಿ ನಡೆದಿದೆ.

fatal-assault-on-wife-by-husband-in-karavara
ಪತಿಯಿಂದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ...ಪ್ರಾಣಾಪಾಯದಿಂದ ಪಾರು

By

Published : Dec 20, 2019, 8:57 PM IST

ಕಾರವಾರ:ಕತ್ತಿಯಿಂದ ಹಲ್ಲೆ ನಡೆಸಿ ಪತಿಯೇ ಪತ್ನಿಯ ಹತ್ಯೆಗೆ ಯತ್ನಿಸಿರುವ ಘಟನೆ ಕಾರವಾರ ತಾಲೂಕಿನ ಬಸುಣಗ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಪ್ರೀತಿ ಕುಡ್ತಲಕರ್ ಹಲ್ಲೆಗೊಳಗಾದ ಮಹಿಳೆ. ಪತಿ ಪ್ರೇಮಾನಂದ ಕುಡ್ತಲಕರ್ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಹಲವು ವರ್ಷಗಳಿಂದ ಗಂಡ ಹೆಂಡತಿ ನಡುವೆ ಜಗಳವಾಗ್ತಾಯಿತ್ತಂತೆ. ಈ ಹಿಂದೆ ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲನ್ನೂ ಸಹ ಏರಿತ್ತು. ಗಂಡನ ಕಾಟದಿಂದ ಬೇಸತ್ತು ತಾಯಿಯ ಮನೆಯಲ್ಲಿ ವಾಸವಿದ್ದ ಪತ್ನಿ, ಶುಕ್ರವಾರ ಅಂಗನವಾಡಿಗೆ ತೆರಳುವಾಗ ಹಿಂದಿನಿಂದ ಬಂದು ಕತ್ತಿಯಲ್ಲಿ ಕಿವಿ ಹಾಗೂ ಕೈ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಪತಿಯಿಂದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ.. ಪ್ರಾಣಾಪಾಯದಿಂದ ಪಾರು..

ಬಳಿಕ ಬೈಕ್​​ನಲ್ಲಿ ಯಾರೋ ಬಂದಿದ್ದನ್ನು ಗಮನಿಸಿ ಪತಿ ಪ್ರೇಮಾನಂದ ಪರಾರಿಯಾಗಿದ್ದು ಗಾಯಗೊಂಡ ಮಹಿಳೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂದ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details