ಶಿರಸಿ: ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುಸರಿ ಗ್ರಾಮದಲ್ಲಿ ನಡೆದಿದೆ.
ಶಿರಸಿ: ಬೆಳೆ ಕೈಕೊಟ್ಟಿದ್ದರಿಂದ ರೈತ ಆತ್ಮಹತ್ಯೆ - shirsi uttarakannada latest news
ಬೆಳೆ ಕೈಕೊಟ್ಟ ಹಿನ್ನೆಲೆ ಹುಸರಿ ಗ್ರಾಮದಲ್ಲಿ ಮಹೇಂದ್ರ ಆರೇರ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿರಸಿ: ಬೆಳೆ ಕೈಕೊಟ್ಟ ಹಿನ್ನಲೆಯಲ್ಲಿ ರೈತ ಆತ್ಮಹತ್ಯೆ
ಮಹೇಂದ್ರ ಆರೇರ (26 )ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಅರಣ್ಯ ಪ್ರದೇಶದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗದ್ದೆಯಲ್ಲಿ ಶುಂಠಿ, ಕಲ್ಲಂಗಡಿ ಬೆಳೆದಿದ್ದ ರೈತನಿಗೆ ಸರಿಯಾದ ಮಾರುಕಟ್ಟೆ ಸಿಗದೆ ಮತ್ತು ಬೆಳೆಯೂ ಸರಿಯಾಗಿ ಬೆಳೆಯದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಸದ್ಯ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.