ಕರ್ನಾಟಕ

karnataka

ETV Bharat / state

ಜಮೀನು ಉಳುಮೆ ಮಾಡುವಾಗ ಯಂತ್ರಕ್ಕೆ ಸಿಲುಕಿ ರೈತ ಸಾವು - karwara latest news

ವನ್ನಳ್ಳಿಯ ರೈತ ಮಂಜುನಾಥ್ ನಾಯ್ಕ ಬೆಳಗ್ಗೆ ಜಮೀನಿನಲ್ಲಿ ಪವರ್ ಟಿಲ್ಲರ್ ಯಂತ್ರದ ಮೂಲಕ ಶೇಂಗಾ ಬೆಳೆಯಲು ಉಳುಮೆ ಮಾಡುತ್ತಿದ್ದರು. ಆಗ ಆಕಸ್ಮಿಕವಾಗಿ ಕಾಲು ಯಂತ್ರದ ಬ್ಲೇಡ್​ಗೆ ಸಿಲುಕಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ವಸ್ಥಗೊಂಡಿದ್ದಾರೆ. ಸ್ಥಳದಲ್ಲಿದ್ದ ಇತರೆ ರೈತರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿಯೇ ಮಂಜುನಾಥ್​ ಸಾವನ್ನಪ್ಪಿದ್ದಾರೆ.

Farmer died while plowing at kumata!
ಉಳುಮೆ ಮಾಡುವಾಗ ಯಂತ್ರಕ್ಕೆ ಸಿಲುಕಿ ರೈತ ಸಾವು!

By

Published : Nov 27, 2020, 1:10 PM IST

ಕಾರವಾರ: ಜಮೀನು ಉಳುಮೆ ಮಾಡುವಾಗ ಯಂತ್ರಕ್ಕೆ ಸಿಲುಕಿ ರೈತನೋರ್ವ ಸಾವನ್ನಪ್ಪಿರುವ ಘಟನೆ ಕುಮಟಾ ತಾಲೂಕಿನ ವನ್ನಳ್ಳಿ ಗ್ರಾಮದಲ್ಲಿ ನಡೆದಿದೆ.

ವನ್ನಳ್ಳಿಯ ಮಂಜುನಾಥ್ ನಾಯ್ಕ ಮೃತ ರೈತ. ಬೆಳಗ್ಗೆ ಜಮೀನಿನಲ್ಲಿ ಪವರ್ ಟಿಲ್ಲರ್ ಯಂತ್ರದ ಮೂಲಕ ಶೇಂಗಾ ಬೆಳೆಯಲು ಉಳುಮೆ ಮಾಡುತ್ತಿದ್ದರು. ಆದರೆ ಆಕಸ್ಮಿಕವಾಗಿ ಕಾಲು ಯಂತ್ರದ ಬ್ಲೇಡ್​ಗೆ ಸಿಲುಕಿದ ಪರಿಣಾಮ ಗಂಭೀರ ಗಾಯಗೊಂಡು ರಕ್ತಸ್ರಾವವಾಗಿತ್ತು. ತಕ್ಷಣ ಸ್ಥಳದಲ್ಲಿದ್ದ ಇತರೆ ರೈತರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದರಾದರೂ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಇದನ್ನು ಓದಿ:ಅತ್ತೆಗೆ ಗೊತ್ತಾಯ್ತು ಸೊಸೆಯ ‘ಆ’ ರಹಸ್ಯ: ಪ್ರಿಯಕರನ ಜತೆ ಸೇರಿ ಅತ್ತೆಯನ್ನೇ ಕೊಂದಳು ಕಿರಾತಕಿ

ಸದ್ಯ ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details