ಶಿರಸಿ:ಕಾರವಾರದಿಂದ ಸಿಒಡಿ ಆಫೀಸರ್ ಆಗಿ ಬಂದಿರುವುದಾಗಿ ಹೇಳಿಕೊಂಡ ವ್ಯಕ್ತಿಯೋರ್ವ ವಿವಿಧ ಮೆಡಿಕಲ್ ಲ್ಯಾಬೋ ರೇಟರಿಗಳಿಗೆ ನುಗ್ಗಿ ದಾಖಲಾತಿಗಳನ್ನು ಕೊಂಡೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಶಿರಸಿಯಲ್ಲಿ ನಕಲಿ ಪೊಲೀಸಪ್ಪನ ಅವಾಂತರ: ದಾಖಲಾತಿ ದೋಚಿ ಸಿಸಿಟಿವಿಯಲ್ಲಿ ಸೆರೆಯಾದ - sirasi fake cid news
ಕಾರವಾರದಿಂದ ಬಂದಿರುವ ಸಿಒಡಿ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿ ನಗರದ ವಿವಿಧ ವೈದ್ಯಕೀಯ ಪ್ರಯೋಗಾಲಯಗಳಿಗೆ ನುಗ್ಗಿ ದಾಖಲಾತಿಗಳನ್ನು ಕೊಂಡೊಯ್ದಿದ್ದಾನೆ.
ನಕಲಿ ಪೊಲೀಸ್
ನಗರದ ವಿವಿಧ ಲ್ಯಾಬ್‌ಗಳಿಗೆ ನುಗ್ಗಿದ ಅಪರಿಚಿತ ವ್ಯಕ್ತಿ ತಾನು ಎಸ್.ಪಿ.ಕಚೇರಿಯಿಂದ ಬಂದಿದ್ದೇನೆ. ನಾನು ಸಿಒಡಿ ಇನ್ಸ್‌ಪೆಕ್ಟರ್ ಮಹೇಶ್ ಎಂದು ಹೇಳಿದ್ದಾನೆ. ಬಳಿಕ ಅಲ್ಲಿದ್ದ ದಾಖಲಾತಿಗಳನ್ನು ಕೊಂಡೊಯ್ದಿದ್ದಾನೆ. ಈ ವೇೆಳೆ ಸಿಬ್ಬಂದಿಗೆ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
ನಕಲಿ ಪೊಲೀಸಪ್ಪನ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.