ಕಾರವಾರ: ಅಂಕೋಲಾ ಪಿಎಸ್‌ಐ ಪ್ರವೀಣ್ ಕುಮಾರ್ ಅವರ ಹೆಸರು ಹಾಗೂ ಫೋಟೋ ಬಳಸಿಕೊಂಡು ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಬಯಲಾಗಿದೆ.
ಪ್ರವೀಣ್ ಕುಮಾರ್ ಪಿಎಸ್‌ಐ ಎಂಬ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದು, ಅವರ ಸ್ನೇಹಿತರಿಗೆ ಪರಿಚಯಸ್ಥರಿಗೆ ಮೆಸೇಜ್ ಕಳುಹಿಸಿ, ತಮಗೆ ತುರ್ತಾಗಿ ಹಣಬೇಕೆಂದು ಅನೇಕರಲ್ಲಿ ಹಣ ಕೇಳಿದ್ದಾರೆ. ಗೂಗಲ್ ಪೇ ಮೂಲಕ ಹಣ ಕಳುಹಿಸುವಂತೆಯೂ ವಿನಂತಿಸುತ್ತಿದ್ದಾರೆ. ವಂಚಕರಿಂದ ಸಂದೇಶ ಸ್ವೀಕರಿಸಿದ ಸ್ನೇಹಿತರು ಪ್ರವೀಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.