ಕಾರವಾರ: ವಿಸ್ತಾರವಾದ ಜಿಲ್ಲೆ ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂಬ ಕೂಗು ಮತ್ತೆ ಜೋರಾಗಿದೆ. ಕಳೆದ ಬಾರಿ ಟ್ವಿಟರ್ ಮೂಲಕ ಅಭಿಯಾನ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದ ಯುವಕರು, ಇದೀಗ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಈ ಬಾರಿ ಮತ್ತೆ ಫೇಸ್ಬುಕ್ ಮೂಲಕ ಜಿಲ್ಲೆಯ ಜನಪ್ರತಿನಿಧಿಗಳನ್ನು ಎಚ್ಚರಿಸಿ ಆಸ್ಪತ್ರೆ ಕನಸನ್ನು ನನಸಾಗಿಸಿಕೊಳ್ಳಲು ಮುಂದಾಗಿದ್ದಾರೆ.
12 ತಾಲೂಕುಗಳನ್ನ ಒಳಗೊಂಡಿರುವ ವಿಸ್ತಾರವಾದ ಜಿಲ್ಲೆಯಲ್ಲಿ ಎಲ್ಲಿಯೂ ಕೂಡ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ. ಜನರು ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳಬೇಕೆಂದ್ರೆ ಪಕ್ಕದ ಗೋವಾ ಇಲ್ಲವೇ ಹುಬ್ಬಳ್ಳಿ, ಮಂಗಳೂರು, ಮಣಿಪಾಲ್, ಶಿವಮೊಗ್ಗ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ. ಈ ಕಾರಣದಿಂದಲೇ ಕಳೆದ ಹಲವು ವರ್ಷಗಳಿಂದ ಸುಸಜ್ಜಿತ ಆಸ್ಪತ್ರೆಗಾಗಿ ಒತ್ತಾಯಿಸಲಾಗುತ್ತಿದೆ.
ಕಳೆದ ಬಾರಿಯೂ ಜಿಲ್ಲೆಯ ಯುವಕರು ಟ್ವಿಟರ್ ಮೂಲಕ #WeNeedEmergencyHospitalInUK ಎಂಬ ಹ್ಯಾಶ್ಟ್ಯಾಗ್ ಮೂಲಕ ಅಭಿಯಾನ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು.