ಭಟ್ಕಳ: ದುಬೈನಿಂದ ಭಟ್ಕಳಕ್ಕೆ ಬಂದವರನ್ನು ಕ್ವಾರಂಟೈನನಲ್ಲಿರಿಸಿರುವ ಅಂಜುಮಾನ್ ಹಾಸ್ಟೆಲ್ ಕಟ್ಟಡದ ಸಮೀಪವಿರುವ ಅಂಜುಮಾನ್ ಪಿಯು ಕಾಲೇಜು ಹಾಗೂ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಕಟ್ಟಡದಲ್ಲಿ ಇಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ನಡೆಸಿರುವ ಬಗ್ಗೆ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಟ್ಕಳದಲ್ಲಿ ಕ್ವಾರಂಟೈನ್ ಕೇಂದ್ರದ ಸ್ವಲ್ಪ ದೂರದಲ್ಲೇ ಪಿಯು ಪರೀಕ್ಷೆ: ಪಾಲಕರ ಅಸಮಾಧಾನ - ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ
ಭಟ್ಕಳದಲ್ಲಿ ಇಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಹಿನ್ನೆಲೆ ತಮ್ಮ ಮಕ್ಕಳನ್ನು ಪಾಲಕರು ಬಿಡಲು ಬಂದಾಗ ಕಾಲೇಜಿನ ಮುಖ್ಯದ್ವಾರದಲ್ಲೇ ಪೊಲೀಸರು ತಡೆದು ನಿಲ್ಲಿಸಿದಕ್ಕೆ ಕೆಲ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೂನ್ 13 ರಂದು ದುಬೈನಿಂದ ಭಟ್ಕಳಕ್ಕೆ ಬಂದಿರುವ 184 ಜನರಲ್ಲಿ 49 ಜನರನ್ನು ತಾಲೂಕಿನ ಅಂಜುಮನ್ ಕಾಲೇಜಿನ ಹಾಷ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ಈ ಕಟ್ಟಡ ಸಮೀಪವಿರುವ ಅಂಜುಮನ್ ಪಿಯು ಕಾಲೇಜು ಹಾಗೂ ಅಂಜುಮನ್ಎಂಜಿನಿಯರಿಂಗ್ ಕಾಲೇಜಗಳ ನಡುವೆ ಇದ್ದು ಪಾಲಕರಲ್ಲಿ ಭಯವನ್ನುಂಟು ಮಾಡಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಶಿಲ್ದಾರ್ ಎಸ್. ರವಿಚಂದ್ರ ಕ್ವಾರಂಟೈನ್ ಮಾಡಲಾದ ಅಂಜುಮನ್ ಹಾಸ್ಟೆಲ್ಗೂ ಪರೀಕ್ಷಾ ಕೇಂದ್ರಗಳಿಗೂ ಯಾವುದೇ ಸಂಪರ್ಕ ಇಲ್ಲ. 600 ರಿಂದ 800 ಮೀಗಳಷ್ಟು ದೂರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಈ ಮೊದಲೇ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದರು. ತಾಲೂಕಿನಲ್ಲಿ ಒಟ್ಟು 4 ಪರೀಕ್ಷೆ ಕೇಂದ್ರಗಳಿದ್ದು, ಈ ಪೈಕಿ ವಿಶೇಷವಾಗಿ ಅಂಜುಮನ್ ಪರೀಕ್ಷಾ ಕೇಂದ್ರಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿತ್ತು.