ಶಿರಸಿ: ಹುಲ್ಲು ಕಡಿಯಲು ಮನೆಯ ಬಳಿಯ ಬೆಟ್ಟಕ್ಕೆ ಹೋದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ವ್ಯಕ್ತಿಯೊಬ್ಬ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ಬದನಗೋಡಿನಲ್ಲಿ ನಡೆದಿದೆ.
ಹುಲ್ಲು ಕಡಿಯಲು ಹೋದ ವ್ಯಕ್ತಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಸ್ವಸ್ಥ - ಶಿರಸಿ ವಿದ್ಯುತ್ ಅವಗಡ ಸುದ್ದಿ
ಹುಲ್ಲು ಕಡಿಯಲು ಎಂದು ಬೆಟ್ಟಕ್ಕೆ ಹೋಗಿದ್ದಾಗ ಸ್ಥಳೀಯ ಟಿಸಿಯಿಂದ ನೆಲಕ್ಕೆ ಅರ್ತಿಂಗ್ ಆಗಿ ವಿದ್ಯುತ್ ಪಸರಿಸುತ್ತಿದ್ದ ಪರಿಣಾಮ ಶಾಕ್ ಹೊಡೆದಿತ್ತು ಎಂದು ಸ್ಥಳೀಕರು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹೆಸ್ಕಾಂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಬದನಗೋಡಿನ ಶಿವಲಿಂಗ ಬೇಡರ್ (35) ವಿದ್ಯುತ್ ಆಪಘಾತಕ್ಕೆ ಒಳಗಾದ ವ್ಯಕ್ತಿ. ಹುಲ್ಲು ಕಡಿಯಲೆಂದು ಬೆಟ್ಟಕ್ಕೆ ಹೋಗಿದ್ದಾಗ ಸ್ಥಳೀಯ ಟಿಸಿಯಿಂದ ನೆಲಕ್ಕೆ ಅರ್ತಿಂಗ್ ಆಗಿ ವಿದ್ಯುತ್ ಪಸರಿಸುತ್ತಿದ್ದ ಪರಿಣಾಮ ಶಾಕ್ ಹೊಡೆದಿತ್ತು ಎಂದು ಸ್ಥಳೀಕರು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹೆಸ್ಕಾಂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಶಾಕ್ ಹೊಡೆದ ತಕ್ಷಣ ಚಿಕಿತ್ಸೆಗೆ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರೂ ಅಲ್ಲಿ ಆಗುವುದಿಲ್ಲ ಎಂದ ಕಾರಣ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗಲಾಗಿದೆ. ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.