ಕರ್ನಾಟಕ

karnataka

ETV Bharat / state

ಶಿರಸಿಯ ಎಂಇಎಸ್ ವಾಣಿಜ್ಯ ಕಾಲೇಜಿಗೆ ಚುನಾವಣಾಧಿಕಾರಿ ಭೇಟಿ.. ಮತ ಎಣಿಕೆ ಕೇಂದ್ರ ಪರಿಶೀಲನೆ - ಎಂಇಎಸ್ ವಾಣಿಜ್ಯ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಮತಯಂತ್ರಗಳ ಸಂಗ್ರಹಣೆ

ಯಲ್ಲಾಪುರ ಉಪ ಚುನಾವಣೆಯ ಮತ ಎಣಿಕೆಯು ಶಿರಸಿಯ ಎಂಇಎಸ್ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದ್ದು, ಮತ ಎಣಿಕೆ ಕೇಂದ್ರಕ್ಕೆ ಅಗತ್ಯ ಭದ್ರತೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ.ಹರೀಶ್ ​ಕುಮಾರ್ ಕೆ ಇಂದು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

electoral-officer-visits-mes-commerce-college-in-shirasi-and-verification-of-the-counting-center
ಶಿರಸಿಯ ಎಂಇಎಸ್ ವಾಣಿಜ್ಯ ಕಾಲೇಜಿಗೆ ಚುನಾವಣಾಧಿಕಾರಿ ಭೇಟಿ.. ಮತ ಎಣಿಕೆ ಕೇಂದ್ರದ ಪರಿಶೀಲನೆ..

By

Published : Dec 6, 2019, 7:30 PM IST

ಶಿರಸಿ: ಯಲ್ಲಾಪುರ ಉಪ ಚುನಾವಣೆಯ ಮತ ಎಣಿಕೆಯು ಶಿರಸಿಯ ಎಂಇಎಸ್ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದ್ದು, ಮತ ಎಣಿಕೆ ಕೇಂದ್ರಕ್ಕೆ ಅಗತ್ಯ ಭದ್ರತೆ ಒದಗಿಸಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಹರೀಶ್ ​ಕುಮಾರ್ ಕೆ ಇಂದು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಶಿರಸಿಯ ಎಂಇಎಸ್ ವಾಣಿಜ್ಯ ಕಾಲೇಜಿಗೆ ಚುನಾವಣಾಧಿಕಾರಿ ಭೇಟಿ.. ಮತ ಎಣಿಕೆ ಕೇಂದ್ರದ ಪರಿಶೀಲನೆ

ಯಲ್ಲಾಪುರ ವಿಧಾನಸಭಾ ಕ್ಷೇತ್ರದ 231 ಮತಗಟ್ಟೆಗಳ ಮತಯಂತ್ರಗಳನ್ನು ಶಿರಸಿಯ ಎಂಇಎಸ್ ವಾಣಿಜ್ಯ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಈ ಕೊಠಡಿ ಸುತ್ತ ಭಾರಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. ಮತ ಎಣಿಕೆ ನಡೆಯುವ ದಿನ ಕೇಂದ್ರದ 200ಮೀಟರ್ ಸುತ್ತ ನಿಷೇಧಾಜ್ಞೆ ಹೊರಡಿಸಲಾಗಿದ್ದು ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನಾಂಕ 08-12-2019ರ ಮಧ್ಯರಾತ್ರಿ 12ಗಂಟೆಯಿಂದ 09-12-2019ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಉಪ ಚುನಾವಣೆಯಲ್ಲಿ ಒಟ್ಟು ಶೇಕಡಾ 77.52 ರಷ್ಟು ಮತದಾನವಾಗಿದ್ದು, ಚುನಾವಣಾ ಕಣದಲ್ಲಿದ್ದ ಬಿಜೆಪಿಯ ಶಿವರಾಮ ಹೆಬ್ಬಾರ, ಕಾಂಗ್ರೆಸ್ ಪಕ್ಷದ ಭೀಮಣ್ಣ ನಾಯ್ಕ, ಜೆಡಿಎಸ್ ನ ಚೈತ್ರಾ ಸೇರಿದಂತೆ ಏಳು ಅಭ್ಯರ್ಥಿಗಳ ಭವಿಷ್ಯ ಡಿಸೆಂಬರ್ 9ರಂದು ಹೊರಬೀಳಲಿದೆ.

For All Latest Updates

ABOUT THE AUTHOR

...view details