ಕರ್ನಾಟಕ

karnataka

ETV Bharat / state

ಉ.ಕನ್ನಡದಲ್ಲಿ ಕೊರೊನಾದಿಂದ ಏಳು ಮಂದಿ ಗುಣಮುಖ...ಎಂಟು ಹೊಸ ಪ್ರಕರಣಗಳು ಪತ್ತೆ ! - karwar latest corona news

ಉತ್ತರ ಕನ್ನಡ ಜಿಲ್ಲೆಯಲ್ಲಿ 4 ಪುರುಷರು ಮತ್ತು 4 ಮಹಿಳೆಯರು ಸೇರಿದಂತೆ 8 ಮಂದಿಗೆ ಕೊರೊನಾ ಪಾಸಿಟಿವ್​ ಬಂದಿದ್ದು, 7 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

corona
ಉ.ಕನ್ನಡದಲ್ಲಿ ಕೊರೊನಾದಿಂದ ಏಳು ಮಂದಿ ಗುಣಮುಖ

By

Published : Jun 21, 2020, 9:16 PM IST

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿಂದು ಸೋಂಕಿನಿಂದ ಗುಣಮುಖರಾಗಿ ಏಳು ಮಂದಿ ಬಿಡುಗಡೆಯಾದ ಬೆನ್ನಲ್ಲೆ ಎಂಟು ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

4 ಪುರುಷರು ಮತ್ತು 4 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ ದೆಹಲಿಯಿಂದ ಆಗಮಿಸಿದ 17 ವರ್ಷದ ಯುವಕ, 43 ವರ್ಷದ ಮಹಿಳೆ, ಮಹರಾಷ್ಟ್ರದಿಂದ ಆಗಮಿಸಿದ್ದ 69 ಹಾಗೂ 42 ವರ್ಷದ ಮಹಿಳೆ, 14 ವರ್ಷದ ಬಾಲಕ, 19 ವರ್ಷದ ಯುವತಿ, 45 ವರ್ಷದ ಪುರುಷ ಮತ್ತು ಉತ್ತರ ಪ್ರದೇಶದಿಂದ ಹಿಂತಿರುಗಿದ 50 ವರ್ಷದ ಪುರುಷನಲ್ಲಿ ಸೊಂಕು ಇರುವುದು ಧೃಡಪಟ್ಟಿದೆ.

ಇದೀಗ ಸೊಂಕಿತರನ್ನು ಕಾರವಾರದ ಕಿಮ್ಸ್ ಅಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 138 ಸೊಂಕಿತರು ಪತ್ತೆಯಾಗಿದ್ದು, 106 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 32 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details