ಕರ್ನಾಟಕ

karnataka

ETV Bharat / state

ಭಟ್ಕಳ: ಇಕೋ ಪಾರ್ಕ್ ಕಲ್ಲು ಬಂಡೆ ಮಧ್ಯೆ ಸಿಲುಕಿದ್ದ ಯುವಕನ ರಕ್ಷಣೆ

ಸ್ನೇಹಿತನೊಂದಿಗೆ ಇಕೋ ಪಾರ್ಕ್ ತೆರಳಿದ ಭಟ್ಕಳದ ಸಮೀರ್ ಸುಲೇಮಾನ್ ಎಂಬ ಯುವಕ ಸಮುದ್ರ ಬಂಡೆಗಳ ಮಧ್ಯದಲ್ಲೆ ಏಕಾಂಗಿಯಾಗಿ ಒಂದು ದಿನ ಕಳೆದಿದ್ದಾನೆ.

eco-park-rescue-of-a-young-man-who-was-stuck-between-rocks
ಭಟ್ಕಳ: ಇಕೋ ಪಾರ್ಕ್ ಕಲ್ಲು ಬಂಡೆ ಮಧ್ಯೆ ಒಂದು ದಿನ ಸಿಲುಕಿದ್ದ ಯುವಕನ ರಕ್ಷಣೆ

By

Published : Apr 15, 2023, 8:27 PM IST

ಭಟ್ಕಳ (ಉತ್ತರ ಕನ್ನಡ):ತನ್ನ ಸ್ನೇಹಿತನೊಂದಿಗೆ ಸರ್ಪನಕಟ್ಟೆಯಲ್ಲಿರುವ ಹುಯ್ಲಮೂಡಿ ಇಕೋ ಪಾರ್ಕ್ ತೆರಳಿದ ಯುವಕನೋರ್ವ ಸಮುದ್ರ ಬಂಡೆ ಮಧ್ಯದಲ್ಲೇ ಒಂದು ದಿನ ಕಳೆದಿದ್ದು, ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಯುವಕನನ್ನು ರಕ್ಷಣೆ ಮಾಡಿರುವ ಘಟನೆ ನಡೆದಿದೆ. ಸಮೀರ್ ಸುಲೇಮಾನ್ ಅಬು ಬಂಡೆ ಮಧ್ಯೆ ಸಿಲುಕಿದ್ದ ಯುವಕ. ಈತ ಭಟ್ಕಳದ ಹಳೆ ಬಸ್ ನಿಲ್ದಾಣದ ನಿವಾಸಿ ಎಂದು ತಿಳಿದು ಬಂದಿದೆ.

ಶುಕ್ರವಾರ ಈತ ತನ್ನ ಸ್ನೇಹಿತನ ಆಟೋದಲ್ಲಿ ಸರ್ಪನಕಟ್ಟೆಯಲ್ಲಿರುವ ಹುಯ್ಲಮೂಡಿ ಇಕೋ ಪಾರ್ಕ್ ತೆರಳಿದ್ದ. ಬಳಿಕ ಅಲ್ಲೇ ಗುಡ್ಡದ ಸಮೀಪ ಇರುವ ಕಲ್ಲು ಬಂಡೆಗಳ ಮಧ್ಯ ಹೋದವನು ಮತ್ತೆ ಮರಳಿ ಬರದ ಕಾರಣ ಆತನ ಸ್ನೇಹಿತ ಭಯಗೊಂಡು ಅಲ್ಲಿಂದ ತೆರಳಿದ್ದಾರೆ. ಸಂಜೆಯಾದಂತೆ ಪಾರ್ಕ್​ಅನ್ನು ಬಂದ್​​ ಮಾಡಲಾಗಿತ್ತು. ಇತ್ತ ಯುವಕನ ಪೋಷಕರು ಮಗ ಕಾಣೆಯಾಗಿದ್ದಾನೆ ಎಂದು ಹುಡುಕಾಟ ನಡೆಸಿದ್ದರು.

ಇಂದು ಬೆಳಗ್ಗೆ ಯುವಕನು ಬಂಡೆಯ ಮಧ್ಯದಲ್ಲಿ ಸಿಲುಕಿರುವುದನ್ನು ತಿಳಿದು ತಕ್ಷಣ ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದು ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ಯುವಕನನ್ನು ರಕ್ಷಣೆ ಮಾಡಿ ಮೇಲಕ್ಕೆ ಎತ್ತಿದ್ದಾರೆ. ಈ ವೇಳೆ ಯುವಕನ ಕುಟುಂಬಸ್ಥರು ಸ್ಥಳದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಭಟ್ಕಳ: ಬುಲೆಟ್ ಬೈಕ್ ಕದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

ABOUT THE AUTHOR

...view details