ಶಿರಸಿ :ನೆರೆಗೆ ತತ್ತರಿಸಿದ ಜನ ಚೇತರಿಸಿಕೊಳ್ಳುವ ಮೊದಲೇ ಗಣೇಶ ಚೌತಿ ಬಂದು ಬಿಟ್ಟಿದೆ. ಆದ್ರೆ ಅತಿಯಾದ ಮಳೆಗೆ ತರಕಾರಿ ಬೆಳೆ ನಾಶವಾಗಿದ್ದು, ಹಬ್ಬಕ್ಕೆ ದರ ಏರಿಕೆ ಬಿಸಿ ತಟ್ಟಿದೆ.
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಅಕ್ಕ ಪಕ್ಕದ ಬೆಳಗಾವಿ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು ಬೆಳೆಗಳು ನಾಶವಾಗಿವೆ. ಮುಖ್ಯವಾಗಿ ಬೆಳಗಾವಿಯಲ್ಲಿ ಬಂದ ನೆರೆಗೆ ಭಾರೀ ಹಾನಿ ಆಗಿದ್ದು, ಶಿರಸಿ ಮಾರುಕಟ್ಟೆಗೆ ಬರುತ್ತಿದ್ದ ಹೂವು, ತರಕಾರಿ ಪ್ರಮಾಣದಲ್ಲಿ ಭಾರೀ ಇಳಿಕೆ ಆಗಿದ್ದು, ಬೆಲೆ ಮಾತ್ರ ಗಗನಕ್ಕೇರಿದೆ.