ಕಾರವಾರ (ಉ.ಕ):ಕ್ಷುಲ್ಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಜಗಳ ತೆಗೆದ ಮಗ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕುಮಟಾ ತಾಲೂಕಿನ ಸಂತೆಗುಳಿ ವ್ಯಾಪ್ತಿಯ ಕಲವೆ ಗ್ರಾಮದಲ್ಲಿ ನಡೆದಿದೆ.
ರಾಮಚಂದ್ರ ಕುಪ್ಪು ಗೌಡ (55) ಮೃತ ದುರ್ದೈವಿ. ನಿತ್ಯ ಕುಡಿದು ಬರುತ್ತಿದ್ದ ಮಗ ಶ್ರೀಕಾಂತ್ ಮನೆಯಲ್ಲಿ ಜಗಳವಾಡುತ್ತಿದ್ದ. ಸೋಮವಾರ ಸಂಜೆ ಕೂಡ ಮನೆಯಲ್ಲಿ ಜಗಳವಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ನಂತದ ಸಿಟ್ಟಿಗೆದ್ದ ಮಗ ಕತ್ತಿಯಿಂದ ತಂದೆ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ತೀವ್ರ ಗಾಯಗೊಂಡ ತಂದೆ ನರಳಿ ಪ್ರಾಣಬಿಟ್ಟಿದ್ದಾರೆ.