ಕಾರವಾರ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿಗನೋರ್ವನನ್ನು ಗೋಕರ್ಣ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.
ಗೋಕರ್ಣದಲ್ಲಿ ಮಾದಕ ವಸ್ತು ಮಾರಾಟ: ಓರ್ವ ವಿದೇಶಿಗನ ಬಂಧನ - ಗೋಕರ್ಣದಲ್ಲಿ ಮಾದಕ ವಸ್ತು ಮಾರಾಟ
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿಗನೋರ್ವನನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.
ವಿದೇಶಿಗ ಅಂದರ್
ಪಿನ್ಲ್ಯಾಂಡ್ ಮೂಲದ ಪಿಯಾಟಾರಿ ಪ್ಯಾಸೊನೆನ್ ಬಂಧಿತ ವಿದೇಶಿಗ. ಈತ ಗೋಕರ್ಣದ ಬಿಜ್ಜೂರಿನ ರಸ್ತೆಯಲ್ಲಿ 500 ಗ್ರಾಂ ಚರಸ್ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಈ ಹಿಂದೆಯೂ ಹಲವು ಬಾರಿ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ. ಆದರೆ ಈ ಬಾರಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗೋಕರ್ಣ ಪೊಲೀಸರು ವಿದೇಶಿಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.