ಕರ್ನಾಟಕ

karnataka

ETV Bharat / state

ಶಿರಸಿಯಲ್ಲಿ ಡ್ರೋನ್ ಕಣ್ಗಾವಲು... ವಾಲಿಬಾಲ್​ ಆಡುತ್ತಿದ್ದವರ ಮೇಲೆ ಕ್ರಮ - ಶಿರಸಿ

ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್​ಡೌನ್​ ಮೊರೆ ಹೋಗಿದೆ. ಆದ್ರೆ ಸರ್ಕಾರದ ಮಾತಿಗೆ ಕ್ಯಾರೇ ಅನ್ನದೆ ಕೆಲವೆಡೆ ಅದನ್ನು ಧಿಕ್ಕರಿಸಿ ಜನರು ಓಡಾಟ ಮಾಡುತ್ತಿದ್ದಾರೆ. ಹಾಗಾಗಿ ಶಿರಸಿ ಪೊಲೀಸ್ ಇಲಾಖೆ ಸೋಮವಾರದಿಂದ ಡ್ರೋನ್ ಕಾರ್ಯಾಚರಣೆ ಆರಂಭಿಸಿದೆ.

Drone operations in Sirsi
Drone operations in Sirsi

By

Published : May 25, 2021, 10:22 AM IST

ಶಿರಸಿ:ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರದಿಂದ ಕಠಿಣ ಲಾಕ್​ಡೌನ್ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರ ಓಡಾಟದ ಮೇಲೆ ವಿಶೇಷ ಗಮನ ಹರಿಸಲು ಶಿರಸಿಯಲ್ಲಿ ಸೋಮವಾರದಿಂದ ಡ್ರೋನ್ ಕಾರ್ಯಾಚರಣೆ ಆರಂಭಿಸಲಾಗಿದೆ.

ಶಿರಸಿಯಲ್ಲಿ ಡ್ರೋನ್ ಕಣ್ಗಾವಲು

ಶಿರಸಿ ಪೊಲೀಸ್ ಇಲಾಖೆಯ ವತಿಯಿಂದ ಡ್ರೋನ್ ಕಾರ್ಯಾಚರಣೆ ನಡೆಸಲಾಗಿದ್ದು, ನಗರದ ಮತ್ತು ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಭಾಗದ ವಿವಿಧೆಡೆಯ ದೃಶ್ಯಗಳನ್ನು ಚಿತ್ರೀಕರಿಸಿ, ವಿವಿಧ ಓಣಿ, ಗ್ರಾಮಗಳಲ್ಲಿ ಜನರ ಸಂಚಾರ, ದಟ್ಟಣೆ, ಅಂಗಡಿಗಳ ಕಾರ್ಯಾಚರಣೆಯ ಕುರಿತು ಮಾಹಿತಿ ಕಲೆಹಾಕಲಾಯಿತು.

ಡ್ರೋನ್ ಕಾರ್ಯಾಚರಣೆಯ ವೇಳೆ ನಗರದ ಗಾಂಧಿ ನಗರ ಹಾಗೂ ಕರೆ ಗುಂಡಿ ರಸ್ತೆಯ ಬಳಿ ಜನರು ವಾಲಿಬಾಲ್, ಕ್ರಿಕೆಟ್ ಆಟದಲ್ಲಿ ತೊಡಗಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಂಡರು. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆಗಳಲ್ಲಿ ಡ್ರೋನ್ ಹಾರಿಸಿ ಮನೆಯಿಂದ ಹೊರ ಬರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಕೊರೊನಾ ಸಂಖ್ಯೆ ಇಳಿಕೆಯತ್ತ ಕಾಲಿಟ್ಟ ಬೆಂಗಳೂರು... 600 ಸೋಂಕಿತರು ಕಣ್ಮರೆ!

ABOUT THE AUTHOR

...view details