ಕಾರವಾರ: ನೀರು ಕುಡಿಯಲು ಬಂದ ಜಿಂಕೆ ಮೇಲೆ ನಾಯಿಗಳು ದಾಳಿ ನಡೆಸಿ ಘಟನೆ ಹೊನ್ನಾವರ ತಾಲೂಕಿನ ಚಂದಾವರದ ಹನುಮಂತ ದೇವಾಲಯದ ಸಮೀಪ ನಡೆದಿದೆ.
ಬೀದಿ ನಾಯಿ ದಾಳಿಯಿಂದ ಜಿಂಕೆ ಸಾವು - Dogs attack on deer in karwar
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನಲ್ಲಿ ಬೀದಿ ನಾಯಿಗಳ ದಾಳಿಗೆ ಜಿಂಕೆ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಬೀದಿ ನಾಯಿ ದಾಳಿಯಿಂದ ಜಿಂಕೆ ಸಾವು
ಜಿಂಕೆ ಮೇಲೆ ಹತ್ತಕ್ಕೂ ಅಧಿಕ ನಾಯಿಗಳು ದಾಳಿ ನಡೆಸಿವೆ. ತೀವ್ರ ರಕ್ತಸ್ರಾವದಿಂದ ಜಿಂಕೆ ಮೃತಪಟ್ಟಿದೆ.
ಉಪ ವಲಯ ಅರಣ್ಯಾಧಿಕಾರಿ ಎಸ್.ಐ.ನಾಯ್ಕ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.