ಕರ್ನಾಟಕ

karnataka

ETV Bharat / state

ಜಿಂಕೆ ಮೇಲೆ ನಾಯಿಗಳ ದಾಳಿ: ಸ್ಥಳೀಯರ ಸಮಯ ಪ್ರಜ್ಞೆಯಿಂದ ಉಳಿದ ಮೂಕ ಪ್ರಾಣಿ ಜೀವ! - Dog attacks deer in karwar

ಕಾಡಿನಿಂದ ನಾಡಿನ ಸಮೀಪ‌‌ ಮೇವನ್ನರಸಿ ಆಗಮಿಸಿದ್ದ ಜಿಂಕೆಯನ್ನು ಕಂಡು ಬೆನ್ನತ್ತಿದ ನಾಯಿಗಳನ್ನು ಸ್ಥಳೀಯರು ಓಡಿಸಿ ಪ್ರಾಣಾಪಾಯದಿಂದ ಕಾಪಾಡಿರುವ ಘಟನೆ ಕಾರವಾರದ ಹಳಿಯಾಳ ತಾಲೂಕಿನ ಭಾಗವತಿ ಬಳಿ ನಡೆದಿದೆ.

dog-attacks-deer-in-haliyala-at-karwara
ಜಿಂಕೆ ಮೇಲೆ ನಾಯಿಗಳ ದಾಳಿ

By

Published : May 3, 2021, 5:29 PM IST

ಕಾರವಾರ: ಕಾಡಿನಿಂದ ನಾಡಿನ ಸಮೀಪ ಬಂದಿದ್ದ ಜಿಂಕೆ ಮೇಲೆ‌ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್​ ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಜಿಂಕೆಯನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿರುವ ಘಟನೆ ಹಳಿಯಾಳ ತಾಲೂಕಿನ ಭಾಗವತಿ ಬಳಿ ನಡೆದಿದೆ.

ಜಿಂಕೆ ಮೇಲೆ ನಾಯಿಗಳ ದಾಳಿ

ಕಾಡಿನಿಂದ ನಾಡಿನ ಸಮೀಪ‌‌ ಮೇವನ್ನರಸಿ ಆಗಮಿಸಿದ್ದ ಜಿಂಕೆಯನ್ನು ಕಂಡು ಬೆನ್ನತ್ತಿದ ನಾಯಿಗಳು ಜಿಂಕೆ ಕಾಲನ್ನು ಕಚ್ಚಿ ಗಾಯಗೊಳಿಸಿದ್ದವು. ಆದರೆ ನಾಯಿಗಳ ಕೂಗಾಟ ಗಮನಿಸಿ ಕಾಡಿನ ಬಳಿ ತೆರಳಿದ ಸ್ಥಳೀಯರು ಜಿಂಕೆಯನ್ನು ನಾಯಿಗಳು ಅಡ್ಡಗಟ್ಟಿದ್ದನ್ನು ಗಮನಿಸಿ ತಕ್ಷಣ ಅದನ್ನು ಪ್ರಾಣಾಪಾಯಾದಿಂದ ಪಾರುಮಾಡಿದ್ದಾರೆ. ಆದರೆ, ಜಿಂಕೆಯ ಬಲಗಾಲಿಗೆ ಸಂಪೂರ್ಣ ಗಾಯವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ತಾತಗೇರಿ ವಿಭಾಗದ ಅರಣ್ಯ ಇಲಾಖೆಯ ಡಿಆರ್​ಎಫ್​ಓ ಪ್ರಕಾಶ್, ಗಾರ್ಡ್ ಗಳಾದ ಹೈದರ್ ಅಲಿ, ಕುಮಾರ್ ಹಂಚಿನಮನಿ ಅವರು ಗಾಯಗೊಂಡ ಜಿಂಕೆಗೆ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಯಲ್ಲಿ ರಕ್ಷಿಸಿಟ್ಟಿದ್ದಾರೆ. ಗುಣಮುಖವಾದ ನಂತರ ದಾಂಡೇಲಿ ಭಾಗದ ಅರಣ್ಯಕ್ಕೆ ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ:ಚಾಮರಾಜನಗರ ಘಟನೆ ಸರ್ಕಾರದ ಪ್ರಾಯೋಜಿತ ಹತ್ಯಾಕಾಂಡ: ದಿನೇಶ್ ಗುಂಡೂರಾವ್

ABOUT THE AUTHOR

...view details