ಶಿರಸಿ :ನಾಯಿ ದಾಳಿಗೆ ಒಳಗಾದ ಜಿಂಕೆ ಹೃದಯಾಘಾತಕ್ಕೊಳಗಾಗಿ ಪ್ರಾಣಬಿಟ್ಟಿರುವ ಘಟನೆ ತಾಲೂಕಿನ ಬನವಾಸಿಯ ಸಂತೋಳ್ಳಿಯಲ್ಲಿ ನಡೆದಿದೆ.
ನಾಯಿ ದಾಳಿಗೊಳಗಾದ ಜಿಂಕೆ ಹೃದಯಾಘಾತದಿಂದ ಸಾವು! - ಉತ್ತರ ಕನ್ನಡ ಸುದ್ದಿ
ಕಾಡಿನಲ್ಲಿ ನಾಯಿ ದಾಳಿಗೊಳಗಾಗಿದ್ದ ಜಿಂಕೆ ಜೀವ ಉಳಿಸಿಕೊಳ್ಳಲು ಗ್ರಾಮಕ್ಕೆ ಬಂದಿದೆ. ಆದರೆ ದಾಳಿಯ ಶಾಕ್ನಿಂದಾಗಿ ಹೃದಯಾಘಾತವಾಗಿದ್ದು ಅದು ಮೃತಪಟ್ಟಿದೆ.
![ನಾಯಿ ದಾಳಿಗೊಳಗಾದ ಜಿಂಕೆ ಹೃದಯಾಘಾತದಿಂದ ಸಾವು! Dog-attacked deer die of heart attack](https://etvbharatimages.akamaized.net/etvbharat/prod-images/768-512-8193965-630-8193965-1595859393896.jpg)
ಸಾವನ್ನಪ್ಪಿದ ಜಿಂಕೆ
ಕಾಡಿನಲ್ಲಿ ನಾಯಿಯ ದಾಳಿಗೊಳಪಟ್ಟ ಜಿಂಕೆ ಜೀವ ಉಳಿಸಿಕೊಳ್ಳಲು ಸಂತೋಳ್ಳಿ ಗ್ರಾಮಕ್ಕೆ ಬಂದಿದೆ. ಜಿಂಕೆಯನ್ನು ನೋಡಿದ ಗ್ರಾಮಸ್ಥರು ನಾಯಿಯನ್ನು ಓಡಿಸಿ, ಆರೈಕೆ ಮಾಡಿ, ಅರಣ್ಯ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.
ಆದರೆ ದಾಳಿಯ ಶಾಕ್ನಿಂದಾಗಿ ಹೃದಯಾಘಾತವಾಗಿ ಜಿಂಕೆ ಮೃತಪಟ್ಟಿದೆ. ಜಿಂಕೆಯ ಆರೈಕೆಗೆ ಆಗಮಿಸಿದ್ದ ವೈದ್ಯರು ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ನಂತರ ಇಲಾಖೆಯ ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಬನವಾಸಿ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.