ಕರ್ನಾಟಕ

karnataka

ETV Bharat / state

ನಮಗಾಗಿ ವೈದ್ಯರು ದೇವರಲ್ಲಿ ಪ್ರಾರ್ಥನೆ ಕೂಡಾ ಮಾಡಿದ್ರು: ಕೊರೊನಾ ಮಣಿಸಿ ಗೆದ್ದು ಬಂದವರ ಮನದಾಳ - ಕೊರೊನಾ

ಕೊರೊನಾ ಎಂಬ ಹೆಸರು ಕೇಳಿದರೆ ಜನರಲ್ಲಿ ಭಯ ಹುಟ್ಟಿಸುವಂತೆ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ ಈ ವೈರಸ್​. ಕೊರೊನಾ ಬಂದರೆ ಸಾಕು ಬದುಕುಳಿಯುವುದೇ ಕಷ್ಟ ಎಂಬ ಮಾತು ಸಾಮಾನ್ಯವಾಗಿಬಿಟ್ಟಿದೆ. ಆದರೂ ಕೆಲವರು ಈ ಮಹಾಮಾರಿಯ ಮಣಿಸಿ ಗೆದ್ದು ಬಂದಿದ್ದಾರೆ.

The word of conviction
ಕೊರೊನಾ ಜಯಿಸಿ ಬಂದವರ ಮನದಾಳದ ಮಾತು

By

Published : Apr 19, 2020, 2:54 PM IST

ಭಟ್ಕಳ(ಉತ್ತರ ಕನ್ನಡ): ದೇವರ ದಯೆಯಿಂದ ಗುಣಮುಖರಾಗಿದ್ದೇವೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸಂತೋಷದ ಅನುಭವವಾಗುತ್ತಿದೆ. ಆಸ್ಪತ್ರೆಯಲ್ಲೂ ನಮಗೆ ಯಾವುದೇ ತೊಂದರೆಯಾಗಿಲ್ಲ. ವೈದ್ಯರು ನಮಗಾಗಿ ಹಾಗೂ ನಮ್ಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದರು. ಹೀಗಂತ ಹೇಳ್ತಿರೋದು ಮಹಾಮಾರಿ ಕೊರೊನಾ‌ ಸೋಂಕಿನಿಂದ ಗುಣಮುಖಗೊಂಡು ಮತ್ತೆ ಹೊಸ‌ ಜೀವನ ಪಡೆದುಕೊಂಡ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ‌ ಮೂವರು ನಿವಾಸಿಗಳು.

ಕೊರೊನಾ ಜಯಿಸಿ ಬಂದವರ ಮನದಾಳದ ಮಾತು

ಕೆಲವು ದಿನಗಳ ಹಿಂದೆ ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ರೋಗಿ ಸಂಖ್ಯೆ 36 ಹಾಗೂ ಸೋಂಕಿತ ರೋಗಿ ಸಂಖ್ಯೆ 98 ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸೋಂಕಿತ, ನಾವು ಆರೋಗ್ಯವಂತರಾಗಿ ಮರಳಿರುವುದಕ್ಕೆ ಜಿಲ್ಲಾಡಳಿತ, ವೈದ್ಯರು ಹಾಗೂ ಪೊಲೀಸರಿಗೆ ಧನ್ಯವಾದ ಅರ್ಪಿಸುತ್ತಿದ್ದೇವೆ ಎಂದಿದ್ದಾರೆ.

ಆರೋಗ್ಯಾಧಿಕಾರಿಗಳು, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ವೈದ್ಯರು ಸಹ ಬಹಳ ಉತ್ತಮವಾಗಿ ನಮಗೆ ಚಿಕಿತ್ಸೆ ನೀಡಿದ್ದಾರೆ. ಸರ್ಕಾರವೂ ನಮ್ಮನ್ನು ಉತ್ತಮವಾಗಿ ನೋಡಿಕೊಂಡಿದ್ದು, ಅಗತ್ಯವಿರುವ ಸೌಲಭ್ಯಗಳನ್ನು ನೀಡುವ ಮೂಲಕ ನಾವು ಮತ್ತೆ ಬದುಕುಳಿಯುವಂತೆ ಮಾಡಿದೆ ಎಂದು ಮೂವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ABOUT THE AUTHOR

...view details