ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ಮಹಿಳೆಗೆ ಮರುಜೀವ ನೀಡಿದ ವೈದ್ಯರು! - undefined

ಇಕ್ಟೊಪಿಕ್​ ಪ್ರಗ್ನೆನ್ಸಿಗೆ ಗುರಿಯಾಗಿದ್ದ ಮಹಿಳೆಗೆ ಕೂಡಲೇ ಸಶ್ತ್ರಚಿಕಿತ್ಸೆ ಮಾಡಿ ಅಪಾಯದಿಂದ ಪಾರು ಮಾಡುವಲ್ಲಿ ಭಟ್ಕಳ ವೈದ್ಯರು ಯಶಸ್ವಿಯಾಗಿದ್ದಾರೆ.

ಭಟ್ಕಳದಲ್ಲಿ ಮಹಿಳೆಗೆ ಮರುಜೀವ ನೀಡಿದ ವೈದ್ಯರು

By

Published : Jun 17, 2019, 10:13 AM IST

ಕಾರವಾರ:ಮಹಿಳೆ ಹೊಟ್ಟೆಯಲ್ಲಿ ಅಪರೂಪದ ಗರ್ಭ ಇಕ್ಟೊಪಿಕ್ ಪ್ರಗ್ನೆನ್ಸಿಯಾಗಿರುವುದನ್ನು ಪತ್ತೆ ಮಾಡಿದ ವೈದ್ಯರು, ತಕ್ಷಣ ಸಶ್ತ್ರಚಿಕಿತ್ಸೆ ಮಾಡುವ ಮೂಲಕ ಮಹಿಳೆಗೆ ಮರುಜೀವ ನೀಡಿದ ಘಟನೆ ಭಟ್ಕಳದಲ್ಲಿ ನಡೆದಿದೆ.

ಭಟ್ಕಳದಲ್ಲಿ ಮಹಿಳೆಗೆ ಮರುಜೀವ ನೀಡಿದ ವೈದ್ಯರು

ಬೇಂಗ್ರೆಯ ಉಳ್ಮಣ್‌ ನಿವಾಸಿಯೋರ್ವರಿಗೆ ಇದ್ದಕ್ಕಿದ್ದಂತೆ ವಿಪರಿತ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಶನಿವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತೆರಳಿ ಸ್ತ್ರೀರೋಗ ತಜ್ಞ ಡಾ. ಸಂತೋಷ ಅವರಲ್ಲಿ ತೋರಿಸಿದ್ದರು. ನಂತರ ಆಕೆಯನ್ನು ಚಿಕಿತ್ಸೆಗೊಳಪಡಿಸಿದ ವೈದ್ಯರು ಸ್ಕ್ಯಾನಿಂಗ್ ಮಾಡಿಸುವಂತೆ ಸೂಚಿಸಿದ್ದರು. ಅನಂತರ ಸ್ಕ್ಯಾನಿಂಗ್​ನಲ್ಲಿ ಗರ್ಭ ಇಕ್ಟೊಪಿಕ್​​ ಪ್ರಗ್ನೆನ್ಸಿ ಆಗಿರುವುದು ಪತ್ತೆಯಾಗಿತ್ತು. ಮಹಿಳೆ ಪರೀಕ್ಷಿಸಿದ ವೈದ್ಯರು ತಕ್ಷಣ ಸಶ್ತ್ರಚಿಕಿತ್ಸೆ ಮಾಡಿಸಬೇಕು. ಇಲ್ಲದಿದ್ದಲ್ಲಿ ಜೀವಕ್ಕೆ ಅಪಾಯವಿರುವ ಬಗ್ಗೆ ತಿಳಿಸಿದ್ದರು. ಅದರಂತೆ ಇದಕ್ಕೆ ಮಹಿಳೆ ಹಾಗೂ ಕುಟುಂಬಸ್ಥರು ಒಪ್ಪಿದ್ದು, ತಕ್ಷಣ ಸಶ್ತ್ರ ಚಿಕಿತ್ಸೆಗೆ ಸಿದ್ಧತೆ ನಡೆಸಿದ್ದರು.

ಇನ್ನು ಈ ಬಗ್ಗೆ ಮಾತನಾಡಿದ ಸ್ತ್ರೀರೋಗ ತಜ್ಞ ಡಾ. ಸಂತೋಷ, ಇಕ್ಟೊಪಿಕ್ ಪ್ರಗ್ನೆನ್ಸಿ ಎಂದು ಕರೆಯುವ ಇದು ಗರ್ಭದ ಹೊರಭಾಗದಲ್ಲಿ ಕಂಡುಬರುವಂತಹ ಕಾಯಿಲೆ. ಇದು ಕಂಡುಬರುವುದು ವಿರಳ. ಆದರೆ, ಮಹಿಳೆಯಲ್ಲಿ ಕಂಡುಬಂದಿದ್ದ ಇದು ಒಡೆದು ಹೊಟ್ಟೆಯಲ್ಲಿ ರಕ್ತಶ್ರಾವವಾಗುತ್ತಿತ್ತು. ಈ ವೇಳೆ ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿತ್ತು. ಕೊನೆಗೆ ಯಶಸ್ವಿಯಾಗಿ ಸಶ್ತ್ರಚಿಕಿತ್ಸೆ ಮಾಡಿರುವುದಾಗಿ ತಿಳಿಸಿದ್ದಾರೆ.

ಕೊನೆ ಕ್ಷಣದಲ್ಲಿ ಸಮಸ್ಯೆ ಪತ್ತೆಯಾಗಿದ್ದರೂ ತಕ್ಷಣ ಮಹಿಳೆ ಜೀವಕ್ಕೆ ಅಪಾಯವಿರುವುದನ್ನು ತಿಳಿದು ಸಶ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಮರುಜೀವ ನೀಡಿದ್ದಾರೆ ವೈದ್ಯರು. ಅಷ್ಟೇ ಅಲ್ಲದೇ, ಈ ವೇಳೆ ರಕ್ತ ಸಿಗದೆ ಕೊನೆಗೆ ಉಡುಪಿಯಿಂದ ತರಿಸಿಕೊಂಡು ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details