ಕರ್ನಾಟಕ

karnataka

ಭಟ್ಕಳ: ಚಾಕಲೇಟ್‌ ಎಂದು ಪ್ಯಾಂಟ್ ಬಟನ್‌ ನುಂಗಿದ ಮಗು; ಪ್ರಾಣ ಕಾಪಾಡಿದ ವೈದ್ಯರು

By

Published : Aug 16, 2023, 6:49 PM IST

Updated : Aug 16, 2023, 7:46 PM IST

ಪ್ಯಾಂಟ್​ ಬಟನ್​ ನುಂಗಿದ್ದ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಪ್ರಾಣ ಕಾಪಾಡಿದ್ದಾರೆ.

ಹಸುಳೆ ಗಂಟಲಲ್ಲಿ ಸಿಲುಕಿದ್ದ ಬಟನ್ ಹೊರ ತೆಗೆದ ವೈದ್ಯರು
ಹಸುಳೆ ಗಂಟಲಲ್ಲಿ ಸಿಲುಕಿದ್ದ ಬಟನ್ ಹೊರ ತೆಗೆದ ವೈದ್ಯರು

ಪ್ಯಾಂಟ್​ ಬಟನ್​ ನುಂಗಿದ್ದ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

ಕಾರವಾರ : ಎರಡು ತಿಂಗಳ ಹಸುಳೆಯ ಗಂಟಲಿನಲ್ಲಿ ಸಿಲುಕಿದ್ದ ಪ್ಯಾಂಟ್ ಬಟನ್‌ ಅನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದು ಜೀವ ಉಳಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ. ಮೂಲತಃ ಬಿಹಾರದ ಸದ್ಯ ಭಟ್ಕಳದ ರಂಗಿನಕಟ್ಟೆ ಬಳಿ ವಾಸವಿರುವ ಕಮಲ-ಕಿಶೋರ ದಂಪತಿಯ ಪುತ್ರಿ ಅಮೃತ (2 ತಿಂಗಳು) ಬಟನ್ ನುಂಗಿದ್ದ ಹಸುಳೆ. ಮಗುವಿನೊಂದಿಗೆ ಆಟವಾಡುತ್ತಿದ್ದ ಈಕೆಯ 2 ವರ್ಷದ ಮತ್ತೋರ್ವ ಬಾಲಕಿಯು ಮಗುವಿಗೆ ಬಟನ್ ನೀಡಿದ್ದಳು. ಮಗು ಚಾಕಲೇಟ್​ ಎಂದು ತಿಳಿದು ಬಾಯಲ್ಲಿ ಇಟ್ಟುಕೊಂಡಿದ್ದು ಕ್ರಮೇಣ ಗಂಟಲಿಗೆ ಜಾರಿದೆ. ತಕ್ಷಣ ಉಸಿರಾಟದ ಸಮಸ್ಯೆಗೊಳಗಾಗಿದೆ. ಇದನ್ನು ಗಮನಿಸಿದ ಪಾಲಕರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಸರ್ಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ. ಸತೀಶ್​ ನೇತೃತ್ವದ ವೈದ್ಯರ ತಂಡ, ಕೊಳವೆ ಮೂಲಕ ಯಶಸ್ವಿ ಚಿಕಿತ್ಸೆ ನಡೆಸಿ ಗಂಟಲಿನಲ್ಲಿ ಸಿಲುಕಿದ್ದ ಬಟನ್ ಹೊರಗೆ ತೆಗೆದಿದ್ದಾರೆ. ಇದೀಗ ಮಗು ಆರೋಗ್ಯವಾಗಿದೆ.

ಕಾರವಾರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ವ್ಯಕ್ತಿಯೋರ್ವನ ಕೈಯಲ್ಲಿದ್ದ ಹಣದ ಬ್ಯಾಗ್ ಕಿತ್ತು ಪರಾರಿಯಾಗಿದ್ದ ಆರೋಪಿಯನ್ನು ಕಾರವಾರ ನಗರ ಠಾಣಾ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಹುಬ್ಬಳ್ಳಿ ಮೂಲದ ನಾಸೀರ್ ಹುಸೇನ್ ಎಂಬಾತ ರಾಷ್ಟ್ರೀಯ ಹೆದ್ದಾರಿ 66ರ ಹಳೆಯ ಮೀನು ಮಾರುಕಟ್ಟೆ ಎದುರು ಮೂತ್ರ ವಿಸರ್ಜನೆಗೆ ತೆರಳುವಾಗ ಅಪರಿಚಿತ ವ್ಯಕ್ತಿ ಆಗಮಿಸಿ, ಬ್ಯಾಗ್ ಕಸಿದು ಪರಾರಿಯಾಗಿದ್ದ.

ಆರೋಪಿಯನ್ನು ಬಂಧಿಸಿದ ಪೊಲೀಸರು

ಬಟ್ಟೆ ವ್ಯಾಪಾರ ಮಾಡುವ ನಾಸೀರ್ ಸುಮಾರು 50 ಸಾವಿರಕ್ಕೂ ಅಧಿಕ ಹಣವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದ್ದು, ಬೈಕ್‌ನಲ್ಲಿ ಬಂದ ಆರೋಪಿ ಹಣದ ಬ್ಯಾಗ್ ಕದ್ದು ಪರಾರಿಯಾಗಿದ್ದಾನೆ. ತಕ್ಷಣ ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ಲಾಲಮಿಯಾಬ್ದುಲ್ ಎಂಬಾತನನ್ನು ಸ್ಥಳಕ್ಕೆ ಕರೆಸಿ, ತಾವೂ ಬೈಕ್‌ನಲ್ಲಿ ನಗರದಲ್ಲೆಲ್ಲ ಸುತ್ತಾಡಿ ಹುಡುಕಾಟ ನಡೆಸಿದರೂ ಸಿಗದ ಹಿನ್ನೆಲೆಯಲ್ಲಿ ನಗರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ನಗರದ ಕೋಣೆನಾಲಾದ ಹಜರತ್ ಅಲಿ ಎನ್ನುವವನ್ನು ಬಂಧಿಸಿ, ಹಣ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ:ಬೆಳಗಾವಿ: ಬಾಲಕ ನುಂಗಿದ್ದ 12 ಅಯಸ್ಕಾಂತೀಯ ಬಟನ್ ಹೊರ ತೆಗೆದ ವೈದ್ಯರು!

Last Updated : Aug 16, 2023, 7:46 PM IST

ABOUT THE AUTHOR

...view details