ಕರ್ನಾಟಕ

karnataka

ETV Bharat / state

ಹನುಮಾನ್​ ಹೆಸರಿನಲ್ಲಿ ಪ್ರತ್ಯೇಕ ಪ್ರಾಧಿಕಾರ, ಹಳ್ಳಿ ಹಳ್ಳಿಗಳಲ್ಲಿ ದೇವಸ್ಥಾನ: ಡಿ ಕೆ ಶಿವಕುಮಾರ್ ಘೋಷಣೆ

ಕಾಂಗ್ರೆಸ್​ ಅಭ್ಯರ್ಥಿ ಪರ ಪ್ರಚಾರ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಉತ್ತರ ಕನ್ನಡದ ಜಿಲ್ಲೆಯ ಹೊನ್ನಾವರಕ್ಕೆ ಆಗಮಿಸಿದ್ದರು. ಈ ವೇಳೆ ಅವರ ಹೆಲಿಕಾಪ್ಟರ್​ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದ, ಹೆಲಿಪ್ಯಾಡ್​ ಬಳಿ ಬೆಂಕಿ ಕಾಣಿಸಿಕೊಂಡಿದೆ.

dk-shivakumar-arrived-to-honnavar-fire-incident-near-helipad-honnavara
ಹೊನ್ನಾವರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪರ ಡಿಕೆಶಿ ಪ್ರಚಾರ : ಹೆಲಿಪ್ಯಾಡ್ ಬಳಿ ಬೆಂಕಿ!

By

Published : May 4, 2023, 3:53 PM IST

Updated : May 4, 2023, 4:27 PM IST

ಹೊನ್ನಾವರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪರ ಡಿಕೆಶಿ ಪ್ರಚಾರ : ಹೆಲಿಪ್ಯಾಡ್ ಬಳಿ ಬೆಂಕಿ!

ಕಾರವಾರ (ಉತ್ತರಕನ್ನಡ): ಹನುಮಾನ್ ಯಾರ ಆಸ್ತಿಯೂ ಅಲ್ಲ. ಹಿಂದುತ್ವ ನಮ್ಮ ಆಸ್ತಿ. ಹನುಮಾನ್ ಹೆಸರಿನಲ್ಲಿ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಿ ಹಳ್ಳಿ ಹಳ್ಳಿಗಳಲ್ಲಿ ದೇವಸ್ಥಾನ, ಗರಡಿ ಸ್ಥಾಪನೆ ಮಾಡುತ್ತೇವೆ. ಈ ಮೂಲಕ ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಹೊನ್ನಾವರದ ಪ್ರಚಾರ ಸಮಾವೇಶಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುತ್ತದೆ. ದೇಶದ್ರೋಹ ಮಾಡುವ ಸಂಘಟನೆಯನ್ನು ಮಾತ್ರ ಶಮನ ಮಾಡುವ ಬಗ್ಗೆ ಹೇಳಿದ್ದೇವೆ. ನಾನು ಶಿವ, ಶಿವನ ಕುಮಾರ. ಪ್ರಧಾನಿ ಮೋದಿ ಈ ದೇಶದಲ್ಲಿ ಬಡವರಿಗೆ ಏನು ಸಹಾಯ ಮಾಡಿದ್ದೇವೆ, ಜನರ ಖಾತೆಗೆ ಹದಿನೈದು ಲಕ್ಷ ಹಾಕಿದ ಬಗ್ಗೆ, ಪೆಟ್ರೋಲ್​ ಡೀಸೆಲ್​ ಬೆಲೆ ಏರಿಕೆ ಬಗ್ಗೆ ಮಾತನಾಡುವುದಿಲ್ಲ ಎಂದು ಟೀಕಿಸಿದರು.

ಬಿಜೆಪಿಗರು ಭಾವನೆ ಮೇಲೆ ಹೋದರೆ ಕಾಂಗ್ರೆಸ್ ಬದುಕಿನ ಮೇಲೆ ಹೋಗುತ್ತಿದೆ. ನಾನು ಹಿಂದೂ, ಸಿದ್ದರಾಮಯ್ಯ ಕೂಡ ಹಿಂದೂ. ಎಲ್ಲಾ ಹಿಂದು ಧರ್ಮದ ಆಚರಣೆಗಳನ್ನು ನಾವು ಪಾಲನೆ ಮಾಡುತ್ತೇವೆ. ಬಂಗಾರಪ್ಪ ಸಿಎಂ ಆದಾಗ ಆರಾಧನ ಸ್ಕೀಮ್ ತಂದು ಹಳ್ಳಿಯಲ್ಲಿರುವ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದರು. ನಾವು ಕೂಡ ಅಧಿಕಾರಕ್ಕೆ ಬಂದರೆ ಹಳ್ಳಿಗಳಲ್ಲಿನ ದೇವಸ್ಥಾನ, ಆಂಜನೇಯ ದೇವಸ್ಥಾನಗಳ ಅಭಿವೃದ್ಧಿ ಮಾಡಿ ಹಿಂದೂ ಯುವಕರಿಗೆ ಶಕ್ತಿ ತುಂಬಲು ಗರಡಿ ಸ್ಥಾಪನೆ ಮಾಡುತ್ತೇವೆ ಎಂದರು.

ಇದನ್ನೂ ಓದಿ :ಡಿಕೆಶಿ ಪತ್ನಿ, ಮಕ್ಕಳು ಬಂದಿಳಿದ ಹೆಲಿಕಾಪ್ಟರ್​ ತಪಾಸಣೆ: ಪರಿಶೀಲನೆ ತಪ್ಪಲ್ಲ ಎಂದ ಕೆಪಿಸಿಸಿ ಅಧ್ಯಕ್ಷ

ನಾನು ಕೂಡ ಹನುಮಾನ್ ಚಾಲೀಸಾ ಹೇಳುತ್ತೇನೆ. ಪ್ರಣಾಳಿಕೆಯನ್ನು ಸರಿಯಾಗಿ ನೋಡದೇ ಬಿಜೆಪಿಯವರು ತಪ್ಪು ಮಾಹಿತಿ ಪ್ರಚಾರ ಮಾಡುತ್ತಿದ್ದಾರೆ. ಜಾತ್ಯಾತೀತ ತತ್ವಕ್ಕೆ ದ್ರೋಹ ಮಾಡುವವರನ್ನು ದೂರ ಇಡುವ ಕಾರ್ಯ ಮಾಡುತ್ತೇವೆ ಎಂದು ಮಾತ್ರ ಹೇಳಿದ್ದೇವೆ ಎಂದರು.

ಡಿಕೆ ಶಿವಕುಮಾರ್​ ಆಗಮಿಸಿದ್ದ ಹೆಲಿಪ್ಯಾಡ್​ ಬಳಿ ಬೆಂಕಿ :ಡಿ.ಕೆ ಶಿವಕುಮಾರ್ ಅವರು ಹೊನ್ನಾವರಕ್ಕೆ ಹೆಲಿಕಾಪ್ಟರ್​ನಲ್ಲಿ ಆಗಮಿಸುತ್ತಿದ್ದಂತೆ ಹೆಲಿಪ್ಯಾಡ್ ಬಳಿ ಹೆಲಿಕಾಪ್ಟರ್​​ಗೆ ಸಿಗ್ನಲ್ ಕೊಡುವ ಸ್ಮೋಕ್​​ ಕ್ಯಾಂಡಲ್​​ನಿಂದ ಕಿಡಿ ಹಾರಿ ಹುಲ್ಲಿಗೆ ಬೆಂಕಿ ತಗುಲಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಡಿ.ಕೆ ಶಿವಕುಮಾರ್ ಹೆಲಿಪ್ಯಾಡ್ ನಲ್ಲಿ ಇರುವಾಗಲೇ ಬೆಂಕಿ ಕಾಣಿಸಿಕೊಂಡಿತ್ತು.

ಹೆಲಿಪ್ಯಾಡ್ ನಲ್ಲಿ‌ ಡಿ‌.ಕೆ ಶಿವಕುಮಾರ್ ಆಗಮಿಸಿದ್ದ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದರು. ಮೈಸೂರಿನಿಂದ ಹೊನ್ನಾವರಕ್ಕೆ ಬಂದ ಡಿ.ಕೆ ಶಿವಕುಮಾರ್ ಅವರು ಕುಮಟಾ- ಹೊನ್ನಾವರ ಕ್ಷೇತ್ರದ ಅಭ್ಯರ್ಥಿ ನಿವೇದಿತ್ ಆಳ್ವಾ ಪರ ಪ್ರಚಾರ ನಡೆಸಲಿದ್ದಾರೆ. ಸುಮಾರು ಹತ್ತು ನಿಮಿಷಗಳ ಕಾಲ ಬ್ಯಾಗ್​ ಮತ್ತು ಹೆಲಿಕಾಪ್ಟರನ್ನು ಪೊಲೀಸರು ಹಾಗೂ ಚುನಾವಣಾ ಸಿಬ್ಬಂದಿ ತಪಾಸಣೆ ನಡೆಸಿದರು.

ಇದನ್ನೂ ಓದಿ :ಡಿಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ಗೆ ಪಕ್ಷಿ ಡಿಕ್ಕಿ; ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

Last Updated : May 4, 2023, 4:27 PM IST

ABOUT THE AUTHOR

...view details