ಕರ್ನಾಟಕ

karnataka

ETV Bharat / state

ಎಲ್ಲಾ ಮಹಿಳೆಯರನ್ನು ಎಳೆದಾಡಿರೂ ಸಿದ್ದು ಸವದಿ ಸುಮ್ಮನಿರುತ್ತಿರೇ?  ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಡಿಕೆಶಿ ಪ್ರಶ್ನೆ - State BJP govt news

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ಪಕ್ಷದ ನಾಯಕರಿಗೆ ಜಾತಿ ರಾಜಕಾರಣ ಮಾಡುವುದೊಂದೆ ಗೊತ್ತು. ಅಭಿವೃದ್ಧಿ ಅನ್ನೋದೆ ಗೊತ್ತಿಲ್ಲ. ಕಾಂಗ್ರೆಸ್​ಗೆ ಅಭಿವೃದ್ಧಿಯೇ ಜಾತಿ-ಧರ್ಮವಾಗಿದೆ ಎಂದರು.

DK Shivakumar angry on State BJP govt
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

By

Published : Nov 28, 2020, 6:36 PM IST

ಶಿರಸಿ : ತೇರದಾಳ ಕ್ಷೇತ್ರದಲ್ಲಿ ಶಾಸಕ ಸಿದ್ದು ಸವದಿ ಓರ್ವ ಮಹಿಳೆಯನ್ನು ಹಿಡಿದು ಎಳೆದಾಡಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದರೂ ಇನ್ನೂ ಅವರನ್ನು ಬಂಧನ ಮಾಡಲು ಸರ್ಕಾರದಿಂದ ಆಗಿಲ್ಲ. ಹಾಗಾದರೆ ಎಲ್ಲಾ ಮಹಿಳೆಯರನ್ನು ಎಳೆದಾಡಿರೂ ಸುಮ್ಮನಿರುತ್ತಿರೇ? ಎಂದು ಪ್ರಶ್ನಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಂತೋಷ್​ ಆತ್ಮಹತ್ಯೆಗೆ ಆ ಒಂದು ಸಿಡಿ ಕಾರಣ: ಡಿ.ಕೆ. ಶಿವಕುಮಾರ್​ ಆರೋಪ

ಶಿರಸಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರ ತಮ್ಮ ಪಕ್ಷದ ಪ್ರತಿನಿಧಿ ಎಂದು ಬಾಯಿ ಮುಚ್ಚಿ ಕುಳಿತಿದೆ. ಮುಖ್ಯಮಂತ್ರಿ, ಗೃಹ ಸಚಿವರು ಎಲ್ಲಾ ಮಹಿಳೆಯರ ವಿಚಾರದಲ್ಲಿಗೂ ಹೀಗೆ ಇರುತ್ತಾರೆಯೇ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಬಂದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ಮಾನ ಸಿಗಲಿದೆ ಎಂದರು.

ಬಿಜೆಪಿಯು ರಾಜ್ಯದಲ್ಲಿ ಜಾತಿ ರಾಜಕಾರಣ ಮಾಡುತ್ತಿದೆ. ಆದರೆ, ಕಾಂಗ್ರೆಸ್​ಗೆ ಅಭಿವೃದ್ಧಿಯೇ ಜಾತಿ ಧರ್ಮವಾಗಿದೆ. ಬಡವರ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು ಎಂದು ಗುಡುಗಿದರು. ಅಲ್ಲದೇ ನ.30 ರಂದು ಪಕ್ಷದ ಹಿರಿಯ ನಾಯಕರು, ಶಾಸಕರೊಂದಿಗೆ ಸಭೆ ನಡೆಸಿ ಮೀಸಲಾತಿಯ ಕುರಿತು ನಿರ್ಧಾರ ಪ್ರಕಟಿಸುವುದಾಗಿ ಇದೇ ವೇಳೆ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕಾಂಗ್ರೆಸ್ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಬೂತ್​ನಲ್ಲೇ 20-25 ಜನರ ಸಮಿತಿ ಮಾಡಿಕೊಂಡು ಕೆಲಸ ಮಾಡಬೇಕಿ. ಕೇಡರ್ ಕೇವಲ ಬಿಜೆಪಿಯದ್ದಲ್ಲ ಎಂದು ತೋರಿಸಬೇಲು ಎಂದ ಅವರು, ಈಗಾಗಲೇ ರಾಜ್ಯ 20 ವರ್ಷ ಹಿಂದಕ್ಕೆ ಹೋಗಿದೆ. ಕಾರಣ ಕಾಂಗ್ರೆಸ್ ಕಾರ್ಯಕರ್ತರಿಂದ ಪುನಃ ನಮ್ಮ ಸರ್ಕಾರ ಮರಳಿ ಬರಬೇಕಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಮುಖರಾದ ಸತೀಶ್​ ಜಾರಕಿಹೊಳೆ, ಆರ್.ವಿ.ದೇಶಪಾಂಡೆ ಸೇರಿದಂತೆ ಕಾಂಗ್ರೆಸ್​ ಕಾರ್ಯಕರ್ತರು ಭಾಗವಹಿಸಿದ್ದರು.

ABOUT THE AUTHOR

...view details