ಕರ್ನಾಟಕ

karnataka

ETV Bharat / state

ಜಿಲ್ಲಾಧಿಕಾರಿಗಿಂತ ಆಶಾ ಕಾರ್ಯಕರ್ತೆಯರ ಅಧಿಕಾರವೇ ಹೆಚ್ಚು.. ಜಿಲ್ಲಾಧಿಕಾರಿ ಡಾ. ಹರೀಶ್​ ಕುಮಾರ್​..

ಅಣ್ಣ ಜಿಲ್ಲಾಧಿಕಾರಿಯಾದರೂ ಕೂಡಾ ತಂಗಿ ಕ್ವಾರಂಟೈನ್ ಆಗಬೇಕಾಗುತ್ತದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಅನ್ಯ ಜಿಲ್ಲೆಯಿಂದ ಬಂದ ವ್ಯಕ್ತಿಯನ್ನು ಕಾಳಜಿವಹಿಸಿ ಕ್ವಾರಂಟೈನ್​ ಮಾಡಿರುವ ಆಶಾಕಾರ್ಯಕರ್ತೆಯರು ಜಿಲ್ಲಾಧಿಕಾರಿಗಿಂತ ಹೆಚ್ಚಿನ ಅಧಿಕಾರ ಹೊಂದಿದ್ದಾರೆ. ಇದೊಂದು ಪುಟ್ಟ ಉದಾಹರಣೆ..

District collecter harish kumar
ಡಿ ಸಿ ಹರೀಶ್​ ಕುಮಾರ್

By

Published : Jun 12, 2020, 8:37 PM IST

ಭಟ್ಕಳ :ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಧಿಕಾರಿಗಳ ಅಧಿಕಾರ ಹೆಚ್ಚಿರುತ್ತದೆ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ, ನಿಜವಾಗಿಯೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಹಾಗೂ ಅವರ ಅಧಿಕಾರವೇ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್‌ಕುಮಾರ್​ ಕೆ ತಿಳಿಸಿದರು.

ನಗರದ ಕಮಲಾವತಿ & ಶಾನಭಾಗ ಸಭಾಭವನದಲ್ಲಿ ಮಾತನಾಡಿದ ಅವರು, ಕೋವಿಡ್-19ಕ್ಕೆ ಸಂಬಂಧಿಸಿದಂತೆ ಕಾವಲು ಸಮಿತಿಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡರು.

ಜಿಲ್ಲಾಧಿಕಾರಿ ಡಿ ಸಿ ಹರೀಶ್​ ಕುಮಾರ್..

‘ನನ್ನ ಸಹೋದರಿ ಲಾಕ್​ಡೌನ್​ ಸಡಿಲಿಕೆ ವೇಳೆ ಮೈಸೂರಿನಿಂದ ತವರು ಮನೆಗೆ ಬರುವೆನೆಂದು ನನಗೆ ಕರೆ ಮಾಡಿದಾಗ, ನಾನು ಸಾಮಾಜಿಕ ಅಂತರ ಅನುಸರಿಸಿ ಬರುವಂತೆ ಹೇಳಿದೆ. ತದ ನಂತರ ಮನೆಗೆ ಬಂದ ನನ್ನ ತಂಗಿಯನ್ನು ಆಶಾ ಕಾರ್ಯಕರ್ತೆಯರು ಹೋಮ್ ಕ್ವಾರಂಟೈನ್ ಮಾಡಿ 14 ದಿನಗಳ ಕಾಲ ಎಲ್ಲಿಗೂ ಹೊರಗಡೆ ಹೋಗಬಾರದೆಂದು ಹೇಳಿ ಹೋಗಿದ್ದಾರೆ.

ನಂತರ ಆಕೆ 14 ದಿನದ ಕ್ವಾರಂಟೈನ್ ಮುಗಿಸಿ ಮೈಸೂರಿಗೆ ವಾಪಸ್​ ತೆರಳಿದ್ದಾಳೆ. ಅಣ್ಣ ಜಿಲ್ಲಾಧಿಕಾರಿಯಾದರೂ ಕೂಡಾ ತಂಗಿ ಕ್ವಾರಂಟೈನ್ ಆಗಬೇಕಾಗುತ್ತದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಅನ್ಯ ಜಿಲ್ಲೆಯಿಂದ ಬಂದ ವ್ಯಕ್ತಿಯನ್ನು ಕಾಳಜಿವಹಿಸಿ ಕ್ವಾರಂಟೈನ್​ ಮಾಡಿರುವ ಆಶಾಕಾರ್ಯಕರ್ತೆಯರು ಜಿಲ್ಲಾಧಿಕಾರಿಗಿಂತ ಹೆಚ್ಚಿನ ಅಧಿಕಾರ ಹೊಂದಿದ್ದಾರೆ ಎಂದ ಅವರು ಇದೊಂದು ಪುಟ್ಟ ಉದಾಹರಣೆ ಎಂದು ತಿಳಿಸಿದರು.

ಕೊರೊನಾ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಗ್ರಾಮದ ಮನೆ ಮನೆಗಳಿಗೆ ತೆರಳಿ ಜನರಿಗೆ ತಿಳಿ ಹೇಳಿದ ಪರಿಣಾಮ ಇವತ್ತು ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದರು.

ABOUT THE AUTHOR

...view details