ಶಿರಸಿ: ಯಲ್ಲಾಪುರ ವಿಧಾನಸಭಾ ಉಪ ಚುನಾವಣಾ ಕಣಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಂಟ್ರಿ ಕೊಟ್ಟಿದ್ದಾರೆ. ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ಪರವಾಗಿ ಯಲ್ಲಾಪುರ ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ.
ಬಿಜೆಪಿಯವರ ಆಸೆ-ಆಮಿಷಗಳಿಗೆ ಬಲಿಯಾಗಿ ರಾಜೀನಾಮೆ ನೀಡಿದವರನ್ನು ಸೋಲಿಸಿ: ದಿನೇಶ್ ಗುಂಡೂರಾವ್ - ಶಿರಸಿ ದಿನೇಶ್ ಗುಂಡೂರುರಾವ್ ಉಪ ಚುನಾವಣೆ ಪ್ರಚಾರ ಸುದ್ದಿ
ಯಲ್ಲಾಪುರ ಮತ್ತು ಬನವಾಸಿ ಭಾಗದಲ್ಲಿ ಭರ್ಜರಿ ಪ್ರಚಾರ ನಡೆಸಿರುವ ಗುಂಡೂರಾವ್, ಭೀಮಣ್ಣ ನಾಯ್ಕ ಅವರಿಗೆ ಮತ ನೀಡುವಂತೆ ಸಾವಿರಾರು ಜನರೊಂದಿಗೆ ಮೆರವಣಿಗೆ ನಡೆಸಿದರು.
ಯಲ್ಲಾಪುರ ಮತ್ತು ಬನವಾಸಿ ಭಾಗದಲ್ಲಿ ಭರ್ಜರಿ ಪ್ರಚಾರ ನಡೆಸಿರುವ ದಿನೇಶ್ ಗುಂಡೂರಾವ್, ಭೀಮಣ್ಣ ನಾಯ್ಕ ಅವರಿಗೆ ಮತ ನೀಡುವಂತೆ ಸಾವಿರಾರು ಜನರೊಂದಿಗೆ ಮೆರವಣಿಗೆ ನಡೆಸಿದರು. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಗುಂಡೂರಾವ್ಗೆ ಸಾಥ್ ನೀಡಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮತಯಾಚನೆ ಮಾಡುತ್ತಾ ಪಾದಯಾತ್ರೆ ಮಾಡಿದರು.
ಮೆರವಣಿಗೆ ಉದ್ದೇಶಿಸಿ ಮಾತನಾಡಿದ ದಿನೇಶ್ ಗುಂಡೂರಾವ್, 17 ಜನ ಶಾಸಕರು ಗೆದ್ದು ಸರ್ಕಾರದ ಭಾಗವಾಗಿದ್ದರು. ಬಿಜೆಪಿಯವರ ಆಸೆ-ಆಮಿಷಗಳಿಗೆ ಬಲಿಯಾಗಿ ರಾಜೀನಾಮೆ ನೀಡಿ ಸ್ಥಿರವಾಗಿದ್ದ ಸರ್ಕಾರವನ್ನು ವಾಮಮಾರ್ಗದಲ್ಲಿ ಬೀಳಿಸಿದ್ದಾರೆ. ಯಲ್ಲಾಪುರದ ಮತದಾರರು ಈ ಬಾರಿ ಚುನಾವಣೆಯಲ್ಲಿ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಅವರನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿ, ಜನತೆಗೆ ದ್ರೋಹ ಮಾಡಿದವರಿಗೆ ಪಾಠ ಕಲಿಸಬೇಕಿದೆ ಎಂದರು.