ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ ಗಮನ ಸೆಳೆದ ಅಮದಳ್ಳಿ ದಿಂಡಿ ಹಬ್ಬದ ಹಗರಣ - ಹಗರಣದ ಪ್ರದರ್ಶನ

ವಿವಿಧ ಸಮುದಾಯದ ಜನರಿಂದ ನಡೆದ ವಿಡಂಬನಾತ್ಮಕ ಅಭಿವ್ಯಕ್ತಪಡಿಸುವ ಹಗರಣದ ಪ್ರದರ್ಶನವೊಂದು ತಾಲೂಕಿನ ಅಮದಳ್ಳಿಯಲ್ಲಿ ಗಮನ ಸೆಳೆಯಿತು. ಸಮಾಜದ ಪ್ರಮುಖ ಘಟನೆಗಳನ್ನು ವೈಚಾರಿಕವಾಗಿ ವಿಡಂಬನೆಗೆ ಹಚ್ಚುವ ಆಚರಣೆಯನ್ನು ಈಗಲೂ ತನ್ನ ಆಕರ್ಷಣೆಯ ಕೇಂದ್ರ ಬಿಂದುವಾಗಿ ಉಳಿಸಿಕೊಂಡಿದೆ.

dindi-habba-hagarana-celebrated-in-karwar
ದಿಂಡಿ ಹಬ್ಬದ ಹಗರಣ

By

Published : Dec 13, 2021, 7:36 AM IST

ಕಾರವಾರ : ದಿಂಡಿ ಹಬ್ಬದ ಅಂಗವಾಗಿ ಸ್ಥಳೀಯ ವಿವಿಧ ಸಮುದಾಯದ ಜನರಿಂದ ನಡೆದ ವಿಡಂಬನಾತ್ಮಕ ಅಭಿವ್ಯಕ್ತ ಪಡಿಸುವ ಹಗರಣದ ಪ್ರದರ್ಶನವೊಂದು ತಾಲೂಕಿನ ಅಮದಳ್ಳಿಯಲ್ಲಿ ಜರುಗಿತು. ಅಮದಳ್ಳಿ ಗ್ರಾಮಸ್ಥರ ಈ ಆಚರಣೆಯು ಬ್ರಿಟಿಷರ ಕಾಲದಿಂದ ಸಾರ್ವಜನಿಕರ ಮನ್ನಣೆಗೆ ಪಾತ್ರವಾಗಿದೆ.

ಗಮನ ಸೆಳೆದ ಅಮದಳ್ಳಿ ದಿಂಡಿ ಹಬ್ಬದ ಹಗರಣ

ದಿಂಡಿ ಹಬ್ಬ ಸಮಾಜದ ಪ್ರಮುಖ ಘಟನೆಗಳನ್ನು ವೈಚಾರಿಕವಾಗಿ ವಿಡಂಬನೆಗೆ ಹಚ್ಚುವ ಆಚರಣೆಯನ್ನು ಈಗಲೂ ತನ್ನ ಆಕರ್ಷಣೆಯ ಕೇಂದ್ರ ಬಿಂದುವಾಗಿ ಉಳಿಸಿಕೊಂಡಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ದಿಂಡಿ ಹಬ್ಬದ ಸಂದರ್ಭದಲ್ಲಿ ಈ ಹಗರಣದ ಆಚರಣೆ ನಡೆದಿರಲಿಲ್ಲ.

ಈ ಬಾರಿ ಬೃಹದಾಕಾರದ ಹೆಬ್ಬಾವು, ಕೊಕ್ಕರೆ ಪಕ್ಷಿ, ಆನೆ, ಜಿಂಕೆ, ರಾಮ, ನರಸಿಂಹನ ಅವತಾರ, ರಾವಣ-ಗಣಪತಿ ಗ್ರಾಮೀಣ ಜನರ ಸಂಪ್ರದಾಯ, ಕೊರೊನಾ ಎಚ್ಚರಿಕೆ, ಹೀಗೆ ಅನೇಕ ವೇಷಧಾರಿಗಳ ಸಂಭ್ರಮ ನೋಡುಗರಿಗೆ ಮನರಂಜನೆ ನೀಡಿತು. ಅವುಗಳು ನೀಡುವ ವಿಡಂಬನಾತ್ಮಕ ಸಂದೇಶಕ್ಕೆ ಮಾರು ಹೋದ ಜನರು ಕೇಕೆ ಹಾಕಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಅಮದಳ್ಳಿ ಡಿಂಡಿ ಹಬ್ಬ : ಗ್ರಾಮದ ನಾರಾಯಣ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ನಾನಾ ಪೂಜಾ ವಿಧಾನ ನಡೆಸಿ ಬಳಿಕ ಇಡೀ ವರ್ಷದುದ್ದಕ್ಕೂ ನಡೆದ ಸಾರ್ವಜನಿಕ ವಿದ್ಯಮಾನಗಳ ಅಣಕು ಪ್ರದರ್ಶನ ಪ್ರದರ್ಶಿಸಿದರು. ಅಮದಳ್ಳಿಯ ಜನರು ಕಳೆದ ಹಲವು ತಲೆಮಾರುಗಳಿಂದ ತಮ್ಮ ಪೂರ್ವಜರು ಉಳಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಈ ವರ್ಷವೂ ಗ್ರಾಮದ ವಿವಿಧ ಸಮುದಾಯದ ಜನ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದರು.

ABOUT THE AUTHOR

...view details