ಶಿರಸಿ:ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಶಿರಸಿ ನಗರದಲ್ಲಿ ಖಾಲಿ ಸೈಟ್‍ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಅದರ ಮಾಲೀಕರು ಸೂಕ್ತ ನಿರ್ವಹಣೆ ಮಾಡದ ಪರಿಣಾಮ ಗಿಡ-ಗಂಟಿಗಳು ಬೃಹದಾಕಾರವಾಗಿ ಬೆಳೆದು ನಿಂತಿದ್ದು, ಅಕ್ಕಪಕ್ಕದವರ ಮನೆಯ ಕಸದ ಡಂಪಿಂಗ್ ಯಾರ್ಡ್‍ಗಳಾಗುತ್ತಿವೆ.
ನಿರ್ವಹಣೆ ಇಲ್ಲದೆ ಪಾಳು ಬಿದ್ದ ಸೈಟ್ಗಳು: ಮಾಲೀಕರಿಗೆ ನೋಟಿಸ್ ನೀಡಲು ಮುಂದಾದ ಶಿರಸಿ ನಗರಸಭೆ - ಶಿರಸಿ ನಗರದೊಳಗೆ ಸಾಕಷ್ಟು ಸಂಖ್ಯೆಯಲ್ಲಿರುವ ಖಾಲಿ ನಿವೇಶನ
ಶಿರಸಿ ನಗರದೊಳಗೆ ಸಾಕಷ್ಟು ಸಂಖ್ಯೆಯಲ್ಲಿರುವ ಖಾಲಿ ನಿವೇಶನಗಳು ದಟ್ಟಾರಣ್ಯದಂತೆ ಗೋಚರಿಸುತ್ತಿವೆ. ಇಲ್ಲಿ 6 ಸಾವಿರಕ್ಕೂ ಅಧಿಕ ಖಾಲಿ ಸೈಟ್ಗಳಿವೆ. ದಶಕಗಳ ಹಿಂದೆ ಹಿಡಿದಿಟ್ಟ ಸೈಟ್‍ಗಳನ್ನು ಮಾಲೀಕರು ನಿರ್ವಹಣೆ ಮಾಡದೆ ಹಾಗೆಯೇ ಬಿಟ್ಟಿದ್ದು, ಗಿಡ-ಗಂಟಿ, ಕಸದಿಂದ ತುಂಬಿ ತುಳುಕುತ್ತಿವೆ.
ಶಿರಸಿ ನಗರದೊಳಗೆ ಸಾಕಷ್ಟು ಸಂಖ್ಯೆಯಲ್ಲಿರುವ ಖಾಲಿ ನಿವೇಶನಗಳು ದಟ್ಟಾರಣ್ಯದಂತೆ ಗೋಚರಿಸುತ್ತಿವೆ. ಇಲ್ಲಿ 6 ಸಾವಿರಕ್ಕೂ ಅಧಿಕ ಖಾಲಿ ಸೈಟ್ಗಳಿವೆ. ದಶಕಗಳ ಹಿಂದೆ ಹಿಡಿದಿಟ್ಟ ಸೈಟ್‍ಗಳನ್ನು ಮಾಲೀಕರು ನಿರ್ವಹಣೆ ಮಾಡದೆ ಹಾಗೆಯೇ ಬಿಟ್ಟಿದ್ದು, ಗಿಡ-ಗಂಟಿ, ಕಸದಿಂದ ತುಂಬಿ ತುಳುಕುತ್ತಿವೆ. ತಮ್ಮ ಜಾಗದ ಸ್ವಚ್ಛತೆಯತ್ತ ಗಮನ ಹರಿಸದೆ ಇರುವುದರಿಂದ ಕಸ, ಪ್ಲಾಸ್ಟಿಕ್ ಮುಂತಾದ ತ್ಯಾಜ್ಯದಿಂದ ದುರ್ನಾತ ಬೀರುತ್ತಿವೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದ್ದು, ನಗರಾಡಳಿತ ಈ ಬಗ್ಗೆ ಗಮನ ಹರಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಆಳೆತ್ತರದಲ್ಲಿ ಹುಲ್ಲು, ಗಿಡಗಳು ಬೆಳೆದು ನಿಂತು ಸರಿಸೃಪಗಳ ತಾಣವಾಗುತ್ತಿವೆ. ನಗರದಲ್ಲಿರುವ ಖಾಲಿ ನಿವೇಶನಗಳು ಪಕ್ಕದ ಮನೆಯವರ ಕಸದ ತೊಟ್ಟಿಗಳಾಗುತ್ತಿವೆ. ನಗರಸಭೆಯ ವಾಹನ ಬರುವುದು ಒಂದು ದಿನ ತಡವಾಯಿತೆಂದರೆ ಮನೆಯೊಳಗಿರುವ ಕಸ ಸೈಟ್‍ನ ಗಿಡ-ಗಂಟಿಯೊಳಗೆ ಸುರಿದು ಕೈತೊಳೆದುಕೊಳ್ಳುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ನಗರಸಭೆಯವರು ಖಾಲಿ ನಿವೇಶನಗಳಲ್ಲಿ ಕಸ ಹಾಕುವುದರಿಂದ ವಿವಿಧ ರೀತಿಯ ರೋಗರುಜಿನಗಳಿಗೆ ಆಸ್ಪದವಾಗಲಿದ್ದು, ಕೂಡಲೇ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡುವುದರ ಜೊತೆಗೆ ಪ್ರಕಟಣೆ ನೀಡಿ ತಮ್ಮ ಜಾಗವನ್ನು ಸ್ವಚ್ಛಗೊಳಿಸುವಂತೆ ಸೂಚಿಸಲು ನಗರಸಭೆ ಮುಂದಾಗಿದೆ.