ಕಾರವಾರ: ಶಿರವಾಡದ ಸಮೀಪ ರೈಲಿನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಕದ್ರಾ ಮೂಲದ ನರೇಶ್ (21), ರಮೇಶ್ (26) ಬಂಧಿತ ಆರೋಪಿಗಳು. ಮಂಗಳೂರು ಮಾರ್ಗದಿಂದ ಗೋವಾಗೆ ಚಲಿಸುತ್ತಿದ್ದ ರೈಲಿನಲ್ಲಿ ಆಗಮಿಸಿ ಶಿರವಾಡದಲ್ಲಿ ಇಳಿದು ಕಾರವಾರ ಕಡೆ ತೆರಳುತ್ತಿದ್ದರು.

ಈ ವೇಳೆ ಅನುಮಾನಗೊಂಡ ಪೊಲೀಸರು, ಪರಿಶೀಲನೆ ನಡೆಸಿದಾಗ 187 ಡಿಟೋನೇಟರ್ ,100 ಜಿಲೆಟಿನ್ ಕಡ್ಡಿಗಳನ್ನು ಚೀಲದಲ್ಲಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಆರೋಪಿಗಳು ಉಡುಪಿಯ ಮಾರಾಟಗಾರನೊಬ್ಬನಿಂದ 4,500 ರೂ.ಗೆ ಡಿಟೋನೇಟರ್, ಜಿಲೆಟಿನ್ ಕಡ್ಡಿಗಳನ್ನು ಖರೀದಿಸಿ ತಂದಿರುವುದಾಗಿ ಬಾಯ್ಬಿಟ್ಟಿದ್ದಾರೆ. ಅಲ್ಲದೇ, ಕಾಳಿ ನದಿಯಲ್ಲಿ ಸ್ಫೋಟಿಸಿ ಮೀನು ಹಿಡಿಯಲು ಹಾಗೂ ಕಲ್ಲು ಬಂಡೆಗಳನ್ನು ಒಡೆಯಲು ತಂದ್ದಿದ್ದೆವು ಎಂದು ತಿಳಿಸಿದ್ದಾರೆ. ವಿಚಾರಣೆ ಮುಂದುವರಿದಿದ್ದು, ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಈ ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.