ಶಿರಸಿ:ಪ್ರತಿ ವರ್ಷವೂ ರಾಜ್ಯ ಸರ್ಕಾರ ನೀಡುವ ಗುರಿ ಸಾಧಿಸುವಲ್ಲಿ ಶಿರಸಿ ಉಪ ವಿಭಾಗದ ಅಬಕಾರಿ ಇಲಾಖೆ ಬಹುತೇಕ ಯಶಸ್ವಿಯಾಗಿದ್ದು, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಿದೆ.
2018-19ನೇ ಸಾಲಿನಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ ಇಲಾಖೆ 1,70,789ಲೀ. ಮದ್ಯ ಬಳಕೆಯ ಗುರಿಯಲ್ಲಿ 1,50,791ಲೀ. ಗಳಷ್ಟು ಮಾರಾಟ ಮಾಡಿ, ಶೆ.84.82ರಷ್ಟು ಗುರಿ ಸಾಧಿಸಿತ್ತು. ಆದರೆ ಈ ಬಾರಿ ಸರ್ಕಾರದಿಂದ ಗುರಿ ಕಡಿಮೆಯಿದ್ದ ಕಾರಣ 1,68,390 ಲೀ. ಗುರಿಯಲ್ಲಿ, 1,63,433 ಲೀ. ಗಳಷ್ಟು ಗುರಿ ಸಾಧಿಸಿ, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಿ ಸರ್ಕಾರಕ್ಕೆ ಲಾಭ ಮಾಡಿಕೊಟ್ಟಿದೆ.
ಮೇ ತಿಂಗಳಲ್ಲಿ ಅತ್ಯಧಿಕ ಮದ್ಯ ಮಾರಾಟವಾಗಿದ್ದು, ಶೆ.108 ರಷ್ಟು ಸಾಧನೆ ಮಾಡಲಾಗಿದೆ. ಇನ್ನು ಮಾರ್ಚ ತಿಂಗಳಲ್ಲಿ ಅತೀ ಕಡಿಮೆ ಮಾರಾಟವಾಗಿದ್ದು, ಕೇವಲ ಶೆ.51 ರಷ್ಟು ಮಾತ್ರ ಗುರಿ ಮುಟ್ಟಲಾಗಿದೆ. ಒಟ್ಟಾರೆಯಾಗಿ ವರ್ಷದಲ್ಲಿ 4957ಲೀ. ಕಡಿಮೆ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷ 26978ಲೀ. ಗಳಷ್ಟು ಮದ್ಯ ಕಡಿಮೆ ಮಾರಾಟವಾಗಿತ್ತು.
ಮದ್ಯ ಮಾರಾಟದಲ್ಲಿ ಗುರಿ ಸಾಧಿಸಿದ ಶಿರಸಿ ಅಬಕಾರಿ ಇಲಾಖೆ, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ - ಕಳೆದ ಒಂದು ವರ್ಷದಲ್ಲಿ 25 ಪ್ರಕರಣಗಳು ದಾಖಲಾಗಿದ್ದು, 15 ಜನರನ್ನು ಬಂಧಿಸಲಾಗಿದೆ
ಪ್ರತಿ ವರ್ಷವೂ ರಾಜ್ಯ ಸರ್ಕಾರ ನೀಡುವ ಗುರಿ ಸಾಧಿಸುವಲ್ಲಿ ಶಿರಸಿ ಉಪ ವಿಭಾಗದ ಅಬಕಾರಿ ಇಲಾಖೆ ಬಹುತೇಕ ಯಶಸ್ವಿಯಾಗಿದ್ದು, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಿದೆ.
ಮದ್ಯ ಮಾರಾಟದಲ್ಲಿ ಗುರಿ ಸಾಧಿಸಿದ ಶಿರಸಿ ಅಬಕಾರಿ ಇಲಾಖೆ, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ
ದಾಳಿ ಪ್ರಕರಣ :
ಕಳೆದ ಒಂದು ವರ್ಷದಲ್ಲಿ 25 ಪ್ರಕರಣಗಳು ದಾಖಲಾಗಿದ್ದು, 15 ಜನರನ್ನು ಬಂಧಿಸಲಾಗಿದೆ. 9 ದ್ವಿಚಕ್ರ ಹಾಗೂ 1 ಕಾರು ಜಪ್ತಿ ಮಾಡಲಾಗಿದ್ದು, 3,52,910ಲೀ. ಮದ್ಯ, 12ಲೀ. ಹೊರ ರಾಜ್ಯದ ಮದ್ಯ, ಕಳ್ಳಭಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ.